ವಿಮೋಚನಕಾಂಡ ಪರಿಚಯ Bro/Jesus Bible/@KannadaBible103
KannadaBible103 KannadaBible103
226 subscribers
43 views
2

 Published On Sep 28, 2024

ವಿಮೋಚನಕಾಂಡ ಪರಿಚಯ Bro/Jesus Bible/@KannadaBible103

EXODUS
ಮೋಶೆಯ ಧರ್ಮಶಾಸ್ತ್ರದಲ್ಲಿ ವಿಮೋಚನಕಾಂಡ ಎಂಬ ದ್ವಿತೀಯ ಭಾಗವು
ಶೀರ್ಷಿಕೆ:
ಯೆಹೂದಿಗಳು ಈ ಪುಸ್ತಕವನ್ನು “ಈಗ ಇವುಗಳ ಹೆಸರುಗಳು” ಎಂಬ ಪ್ರಾರಂಭದ ಪದಗಳಿಂದ ಕರೆದರು ಮತ್ತು ನಂತರ ಅವರು “ಹೆಸರುಗಳು” ಎಂದು ಸಂಕ್ಷಿಪ್ತಗೊಳಿಸಿದರು. “ವಿಮೋಚನಕಾಂಡ” ಎಂಬ ಹೆಸರನ್ನು ನಿಧಾನವಾಗಿ ನೀಡಲಾಯಿತು (ಆದಿಕಾಂಡ ಪರಿಚಯವನ್ನು ನೋಡಿ). ಇದರ ಅರ್ಥ “ನಿರ್ಗಮನ” ಅಥವಾ “ಹೊರಗೆ ಹೋಗುವುದು”, ಮತ್ತು ಐಗುಪ್ತಿನಿಂದ ಇಸ್ರಾಯೇಲ್ ಜನರು ನಿರ್ಗಮಿಸುವುದನ್ನು ಸೂಚಿಸುತ್ತದೆ.
ಲೇಖಕ ಮತ್ತು ದಿನಾಂಕ:
ಆದಿಕಾಂಡದ ಲೇಖಕ ಮತ್ತು ದಿನಾಂಕವನ್ನು ನೋಡಿ.
ಧ್ಯೇಯ:
ದಾಸತ್ವದಿಂದ ಇಸ್ರಾಯೇಲ್ಯರ ವಿಮೋಚನೆಯು ಈ ಪುಸ್ತಕದ ಮೊದಲ ಭಾಗದ ಮುಖ್ಯ ಅಂಶವಾಗಿದೆ, ಮತ್ತು ದೇವರ ಜನರು ಹೇಗೆ ಜೀವಿಸಬೇಕು ಮತ್ತು ಅಭಿಷೇಕಿಸಿದ ಎಂಬುದು ಎರಡನೇ ಭಾಗದ ಮುಖ್ಯ ಅಂಶವಾಗಿದೆ. ಇಡೀ ಪುಸ್ತಕವು ಸಾಂಕೇತಿಕ ಅರ್ಥಗಳಿಂದ ಕೂಡಿದೆ ಮತ್ತು ಇಂದಿನ ವಿಶ್ವಾಸಿಗಳಿಗೆ ಹೆಚ್ಚಿನ ಸೂಚನೆಗಳನ್ನು ಹೊಂದಿದೆ – 2 ತಿಮೊ 3:16-17 ನೋಡಿರಿ.
ಅನುಕ್ರಮಣಿಕೆ:
ಐಗುಪ್ತಿನಲ್ಲಿ ಇಸ್ರಾಯೇಲ್ಯರ ದಾಸತ್ವ 1:1-22
ಮೋಶೆಯ ಜನನ ಮತ್ತು ಅವನ ಅರಂಭಿಕ ವರ್ಷಗಳು 2:1-10
ಮೋಶೆ ಮಿದ್ಯಾನಿಗೆ ಓಡಿಹೋದದ್ದು, ಅಲ್ಲಿ ಕಳೆದ 40 ವರ್ಷಗಳು 2:11-24
ದೇವರು ಮೋಶೆಯನ್ನು ಉರಿಯುವ ಪೊದೆಯ ಬಳಿ ಕರೆದು ಐಗುಪ್ತಿಗೆ ಕಳುಹಿಸುವುದು 3:1—4:17
ಮೋಶೆ ಆಕ್ಷೇಪಣೆ 3:11-13
ದೇವರು ತನ್ನ ಹೆಸರನ್ನು ಪ್ರಕಟಿಸುತ್ತಾನೆ 3:14-15
ಮೋಶೆಯು ಮತ್ತೆ ಆಕ್ಷೇಪಿಸುತ್ತಾನೆ ಮತ್ತು ದೇವರು ಅದ್ಭುತಗಳನ್ನು ಮಾಡಲು ಶಕ್ತಿಯನ್ನು ಕೊಡುತ್ತಾನೆ 4:1-9
ಮೋಶೆಯು ಮತ್ತೆ ಆಕ್ಷೇಪಿಸಿ ಬೇರೊಬ್ಬರನ್ನು ಕಳುಹಿಸುವಂತೆ ದೇವರನ್ನು ಕೇಳುತ್ತಾನೆ 4:10-12
ಮೋಶೆ ಐಗುಪ್ತಕ್ಕೆ ಹಿಂದಿರುಗುತ್ತಾನೆ 4:18-31
ಮೋಶೆ ಮತ್ತು ಆರೋನರು ಫರೋಹನ ಬಳಿಗೆ ಹೋಗುತ್ತಾರೆ 5:1-21
ದೇವರ ಬಿಡುಗಡೆಯ ಭರವಸೆ 5:22—6:12
ಆರೋನನ ಕೋಲು ಹಾವಾಗಿ ಮಾರ್ಪಡುತ್ತದೆ. 7:9-13
ದೇವರು ಐಗುಪ್ತಿನ ಮೇಲೆ ವಿಪತ್ತುಗಳನ್ನು ಬರಮಾಡಿದ್ದು 7:14—12:30
ನೀರು ರಕ್ತವಾಗಿ ಮಾರ್ಪಟ್ಟಿದ್ದು 7:14-24
ಕಪ್ಪೆಗಳು 7:25—8:15
ಹುಳಗಳು 8:16-19
ನೊಣಗಳು 8:20-32
ಪಶುಗಳ ಸಾವು 9:1-7
ಹುಣ್ಣುಬೊಕ್ಕೆಗಳು 9:8-12
ಆನೆಕಲ್ಲು 9:13-35
ಮಿಡತೆಗಳು 10:1-20
ಕತ್ತಲೆ 10:21-24
ಚೊಚ್ಚಲ ಗಂಡು ಮಕ್ಕಳ ಸಾವು 11:1—12:30
ಪಸ್ಕಹಬ್ಬ 12:1-28
ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟುಹೊರಟದ್ದು 12:31-42
ಪಸ್ಕಹಬ್ಬದ ನಿಯಮಗಳು 12:43-50
ಚೊಚ್ಚಲ ಮಗುವನ್ನು ಕುರಿತು ನಿಯಮಗಳು 13:1-16
ಮೋಡ ಮತ್ತು ಅಗ್ನಿಸ್ತಂಭಗಳು 13:20-22
ಇಸ್ರಾಯೇಲ್ಯರು ಕೆಂಪು ಸಮುದ್ರವನ್ನು ದಾಟಿದ್ದು, ಫರೋಹನ ಸೈನ್ಯವು ಮುಳುಗಿದ್ದು 14:1-31
ಬಿಡುಗಡೆಯ ಹಾಡು 15:1-21
ಮಾರಾ ಮತ್ತು ಏಲೀಮಿನ ನೀರು 15:22-27
ದೇವರು ಮನ್ನಾ ಮತ್ತು ಲಾವಕ್ಕಿಯನ್ನು ಒದಗಿಸುತ್ತಾನೆ 16:1-36
ದೇವರು ಬಂಡೆಯಿಂದ ನೀರನ್ನು ಬರಮಾಡುತ್ತಾನೆ 17:1-7
ಅಮಾಲೇಕ್ಯರೊಂದಿಗೆ ಯುದ್ಧ 17:8-15
ಮೋಶೆಯ ಮಾವ 18:1-27
ದೇವರು ಮತ್ತು ಇಸ್ರಾಯೇಲ್ ಜನರು ಸೀನಾಯಿ ಬೆಟ್ಟದ ಬಳಿ 19:1-25
ಒಡಂಬಡಿಕೆಯ ನಿಯಮಗಳು 19:5-8
ಹತ್ತು ಆಜ್ಞೆಗಳು 20:1-17
ಹೆಚ್ಚಿನ ಆಜ್ಞೆಗಳು ಮತ್ತು ನಿಯಮಗಳು 20:22—23:13
ವರುಷಕ್ಕೆ ಮೂರು ಜಾತ್ರೆಗಳು 23:14-17
ಇಸ್ರಾಯೇಲ್ಯರನ್ನು ಮುನ್ನಡೆಸಲು ದೇವರ ದೂತನು 23:20-23
ಒಡಂಬಡಿಕೆಯನ್ನು ದೃಢೀಕರಿಸಿದ್ದು 24:1-18
ದೇವರು ಗುಡಾರದ ಬಗ್ಗೆ ನಿಯಮಗಳನ್ನು ನೀಡುವುದು 25:1—31:18
ಮಂಜೂಷ 25:10-22
ಮೇಜು 25:23-30
ದೀಪಸ್ತಂಭ 25:31-40
ಗುಡಾರ 26:1-37
ದಹನಬಲಿಗಳಿಗೆ ಬಲಿಪೀಠ 27:1-8
ಅಂಗಳ 27:9-19
ಎಣ್ಣೆ 27:20-21
ಯಾಜಕರಿಗೆ ವಸ್ತ್ರಗಳು 28:1-43
ಯಾಜಕರ ಶುದ್ಧೀಕರಣ 29:1-45
ಧೂಪದ್ರವ್ಯದ ಧೂಪವೇದಿಕೆ 30:1-10
ಪ್ರಾಯಶ್ಚಿತ್ತದ ಕಪ್ಪ 30:11-16
ತೊಳೆದುಕೊಳ್ಳುವುದಕ್ಕೆ ತಾಮ್ರದ ಗಂಗಾಳ 30:17-21
ಅಭಿಷೇಕಿಸಿದ ತೈಲ 30:22-33
ಧೂಪದ್ರವ್ಯ 30:34-38
ಕಟ್ಟುವವರು 31:1-11
ಸಬ್ಬತ್ 31:12-18
ಚಿನ್ನದ ಕರು 32:1-29
ಮೋಶೆಯು ದೇವರಲ್ಲಿ ಬೇಡಿಕೊಳ್ಳುವುದು 32:30-34
ದೇವದರ್ಶದ ಡೇರೆ 33:7-11
ದೇವರ ಮಹಿಮೆಯನ್ನು ಕಾಣಲು ಮೋಶೆಯು ಬೇಡಿಕೊಳ್ಳುವುದು 33:12-23
ಮೋಶೆಯು ದೇವರ ಮಹಿಮೆಯನ್ನು ಕಾಣುವುದು, ದೇವರು ತನ್ನ ಹೆಸರನ್ನು ಪ್ರಕಟಿಸುವುದು. 34:1-7
ದೇವರು ಇನ್ನೂ ಹೆಚ್ಚಿನ ನಿಯಮಗಳನ್ನು ನೀಡುವುದು 34:10-28
ಮೋಶೆಯ ಮುಖವು ಪ್ರಕಾಶಿಸುವುದು 34:29-35
ಗುಡಾರದ ಕಟ್ಟಡಕ್ಕಾಗಿ ಕಾಣಿಕೆಗಳು 35:4—36:7
ಗುಡಾರವನ್ನು ಕಟ್ಟುವುದು 36:8—40:33
ದೇವರ ಮಹಿಮೆಯು ಗುಡಾರವನ್ನು ತುಂಬುವುದು 40:34-38

show more

Share/Embed