ವಿಮೋಚನಕಾಂಡ 8:1-32 Bro/Exodus/Jesus Bible/@KannadaBible103
KannadaBible103 KannadaBible103
226 subscribers
3 views
1

 Published On Sep 29, 2024

ವಿಮೋಚನಕಾಂಡ 8:1-32 Bro/Exodus/Jesus Bible/@KannadaBible103

ಕಪ್ಪೆಗಳಿಂದ ಬಾಧೆಯುಂಟಾದದ್ದು
81 ✽ತರುವಾಯ ಯೆಹೋವನು ಮೋಶೆಗೆ ಇಂತೆಂದನು – ನೀನು ಫರೋಹನ ಬಳಿಗೆ ಹೋಗಿ ಹೀಗನ್ನಬೇಕು – ಯೆಹೋವನು ಆಜ್ಞಾಪಿಸುವದೇನಂದರೆ – ನನ್ನನ್ನು ಆರಾಧಿಸುವಂತೆ ನನ್ನ ಜನರಿಗೆ ಅಪ್ಪಣೆ ಕೊಡಬೇಕು. 2 ✽ಅಪ್ಪಣೆಕೊಡದೆ ಹೋದರೆ ನಾನು ನಿನ್ನ ದೇಶಕ್ಕೆಲ್ಲಾ ಕಪ್ಪೆಗಳಿಂದ ಉಪದ್ರವ ಕೊಡುವೆನು. 3 ನೈಲ್ ನದಿಯಲ್ಲಿ ಕಪ್ಪೆಗಳು ಅಸಂಖ್ಯವಾಗಿ ಹುಟ್ಟುವವು; ಅವು ಹೊರಟುಬಂದು ನಿನ್ನ ಅರಮನೆಯಲ್ಲಿಯೂ ಮಲಗುವ ಕೋಣೆಯಲ್ಲಿಯೂ ಮಂಚದ ಮೇಲೆಯೂ ಬರುವದಲ್ಲದೆ ನಿನ್ನ ಪರಿವಾರದವರ ಮನೆಗಳಲ್ಲಿಯೂ ನಿನ್ನ ಪ್ರಜೆಗಳ ಮೇಲೆಯೂ ಒಲೆಗಳಲ್ಲಿಯೂ ಹಿಟ್ಟುನಾದುವ ಕೊಣವಿಗೆಗಳಲ್ಲಿಯೂ✽ ಬರುವವು; 4 ನಿನ್ನ ಮೇಲೆಯೂ ನಿನ್ನ ಪ್ರಜೆಗಳ ಮೇಲೆಯೂ ಪರಿವಾರದವರ ಮೇಲೆಯೂ ಕಪ್ಪೆಗಳು ಹರಡಿಕೊಳ್ಳುವವು.
5 ಯೆಹೋವನು ಮೋಶೆಯ ಸಂಗಡ ಮಾತಾಡಿ – ನೀನು ಆರೋನನಿಗೆ – ನೀನು ಕೋಲನ್ನು ಹಿಡಿದುಕೊಂಡು ಹೊಳೆ ಕಾಲುವೆ ಕೆರೆ ಇವುಗಳ ಮೇಲೆ ಕೈಚಾಚು; ಆಗ ಐಗುಪ್ತದೇಶದ ಮೇಲೆಲ್ಲಾ ಕಪ್ಪೆಗಳು ಬರುವವು ಎಂದು ಹೇಳಬೇಕು ಅಂದನು. 6 ✝ಆರೋನನು ಐಗುಪ್ತದೇಶದಲ್ಲಿ ನೀರಿರುವ ಎಲ್ಲಾ ಸ್ಥಳಗಳ ಮೇಲೆ ಕೈಚಾಚಲು ಕಪ್ಪೆಗಳು ಹೊರಟುಬಂದು ದೇಶವನ್ನೆಲ್ಲಾ ಮುಚ್ಚಿಕೊಂಡವು. 7 ✽ಜೋಯಿಸರು ತಮ್ಮ ಗುಪ್ತ ವಿದ್ಯೆಗಳಿಂದ ಹಾಗೆಯೇ ಮಾಡಿ ಐಗುಪ್ತದೇಶದ ಮೇಲೆ ಕಪ್ಪೆಗಳನ್ನು ಬರಮಾಡಿದರು.
8 ✽ಆಗ ಫರೋಹನು ಮೋಶೆ ಆರೋನರನ್ನು ಕರೆಸಿ – ನೀವು ಯೆಹೋವನನ್ನು ಬೇಡಿಕೊಂಡು ಈ ಕಪ್ಪೆಗಳನ್ನು ನನ್ನ ಬಳಿಯಿಂದಲೂ ನನ್ನ ಪ್ರಜೆಗಳ ಬಳಿಯಿಂದಲೂ ತೊಲಗಿಸಬೇಕು; ಹಾಗೆ ಮಾಡಿದರೆ ನಿಮ್ಮ ಜನರು ಯೆಹೋವನಿಗೋಸ್ಕರ ಯಜ್ಞಮಾಡುವಂತೆ ಅವರಿಗೆ ನಾನು ಅಪ್ಪಣೆ ಕೊಡುವೆನು ಅಂದನು. 9 ಮೋಶೆ – ಘನಚಿತ್ತಕ್ಕೆ ತೋರಿದಂತೆ ನೀನೇ ಅದಕ್ಕೊಂದು ಕಾಲವನ್ನು ನೇವಿುಸಬೇಕು. ಈ ಕಪ್ಪೆಗಳು ಯಾವಾಗ ನಿನ್ನ ಬಳಿಯಿಂದಲೂ ನಿನ್ನ ಮನೆಗಳಿಂದಲೂ ತೊಲಗಿ ನದಿಯಲ್ಲಿ ಮಾತ್ರ ಉಳಿಯುವಂತೆ ನಾನು ನಿನಗೋಸ್ಕರವೂ ನಿನ್ನ ಪ್ರಜಾಪರಿವಾರದವರಿಗೋಸ್ಕರವೂ ಬೇಡಿಕೊಳ್ಳಲಿ ಎಂದು ಫರೋಹನನ್ನು ಕೇಳಲು ಅವನು – ನಾಳೆ ಅಂದನು. 10 ಅದಕ್ಕೆ ಮೋಶೆ – ನಿನ್ನ ಮಾತಿನ ಪ್ರಕಾರವೇ ಆಗುವದು; 11 ಕಪ್ಪೆಗಳು ನಿನ್ನನ್ನೂ ನಿನ್ನ ಮನೆಗಳನ್ನೂ ನಿನ್ನ ಪ್ರಜಾಪರಿವಾರದವರನ್ನೂ ಬಿಟ್ಟು ನದಿಯಲ್ಲಿ ಮಾತ್ರ ಇರುವವು; ಇದರಿಂದ ನಮ್ಮ ದೇವರಾಗಿರುವ ಯೆಹೋವನಿಗೆ ಸಮಾನರು ಬೇರೆ ಯಾರೂ ಇಲ್ಲವೆಂದು✽ ತಿಳಿದುಕೊಳ್ಳುವಿ ಅಂದನು. 12 ಮೋಶೆ ಆರೋನರು ಫರೋಹನ ಬಳಿಯಿಂದ ಹೊರಟುಹೋದಾಗ ಮೋಶೆ ಯೆಹೋವನಿಗೆ ನೀನು ಫರೋಹನ ಮೇಲೆ ಬರಮಾಡಿರುವ ಕಪ್ಪೆಗಳನ್ನು ತೊಲಗಿಸಬೇಕೆಂದು ಪ್ರಾರ್ಥನೆ ಮಾಡಿಕೊಂಡನು. 13 ಯೆಹೋವನು ಮೋಶೆಯ ಮಾತಿನ ಪ್ರಕಾರ ಮಾಡಿದನು; ಮನೆಗಳಲ್ಲಿಯೂ ಅಂಗಳಗಳಲ್ಲಿಯೂ ಬೈಲಿನಲ್ಲಿಯೂ ಇದ್ದ ಕಪ್ಪೆಗಳು ಸತ್ತುಹೋದವು. 14 ಜನರು ಅವುಗಳನ್ನು ರಾಶಿರಾಶಿಯಾಗಿ ಕೂಡಿಸಲು ದೇಶದಲ್ಲೆಲ್ಲಾ ದುರ್ವಾಸನೆ ತುಂಬಿತು. 15 ✽ಆದರೆ ಫರೋಹನು ಉಪಶಮನವಾಯಿತೆಂದು ತಿಳಿದಾಗ ತನ್ನ ಹೃದಯವನ್ನು ಮೊಂಡುಮಾಡಿಕೊಂಡನು. ಯೆಹೋವನು ಹೇಳಿದ್ದಂತೆಯೇ ಅವನು ಅವರ ಮಾತನ್ನು ಕೇಳದೆ ಹೋದನು.
ಹೇನು ಮುಂತಾದ ಹುಳಗಳ ಕಾಟವುಂಟಾದದ್ದು
16 ತರುವಾಯ ಯೆಹೋವನು ಮೋಶೆಯ ಸಂಗಡ ಮಾತಾಡಿ – ನೀನು ಆರೋನನಿಗೆ – ನಿನ್ನ ಕೋಲನ್ನು ಚಾಚಿ ಭೂವಿುಯ ಧೂಳನ್ನು ಹೊಡೆ; ಹೊಡೆಯಲು ಐಗುಪ್ತ ದೇಶದಲ್ಲೆಲ್ಲಾ ಧೂಳು ಹೇನುಗಳಾಗುವದು✽✽ ಎಂದು ಹೇಳು ಅಂದನು. 17 ಅವರು ಹಾಗೆಯೇ ಮಾಡಿದರು; ಆರೋನನು ಕೋಲನ್ನು ಹಿಡುಕೊಂಡು ಕೈಚಾಚಿ ಭೂವಿುಯ ಧೂಳನ್ನು ಹೊಡೆಯಲು ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹೇನುಗಳು ಬಂದವು; ಐಗುಪ್ತ ದೇಶದಲ್ಲೆಲ್ಲಾ ಭೂವಿುಯಲ್ಲಿರುವ ಧೂಳು ಹೇನುಗಳಾಯಿತು. 18 ✽ಜೋಯಿಸರು ತಮ್ಮ ಗುಪ್ತ ವಿದ್ಯೆಯಿಂದ ಹಾಗೆಯೇ ಹೇನುಗಳನ್ನು ಉಂಟುಮಾಡುವದಕ್ಕೆ ಪ್ರಯತ್ನ ಮಾಡಿದಾಗ್ಯೂ ಆಗದೆ ಹೋಯಿತು. ಆ ಹೇನುಗಳು ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಇದ್ದವು. 19 ಆಗ ಆ ಜೋಯಿಸರು – ಇದು ದೇವರ ಕೈಕೆಲಸವೇ✽ ಸರಿ ಎಂದು ಫರೋಹನಿಗೆ ಹೇಳಿದರು. ಆದರೂ ಫರೋಹನ ಹೃದಯವು ಕಠಿಣವಾಗಿತ್ತು; ಯೆಹೋವನು ಮೋಶೆಗೆ ಮುಂತಿಳಿಸಿದಂತೆಯೇ ಅವನು ಅವರ ಮಾತನ್ನು ಕೇಳದೆ ಹೋದನು.
20 ತರುವಾಯ ಯೆಹೋವನು ಮೋಶೆಗೆ – ನೀನು ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೋ; ಅವನು ನದಿಗೆ ಹೋಗುತ್ತಾನಲ್ಲಾ. ನೀನು ಅವನಿಗೆ ಹೀಗನ್ನಬೇಕು – ಯೆಹೋವನು ಆಜ್ಞಾಪಿಸುವದೇನಂದರೆ, ನನ್ನನ್ನು ಆರಾಧಿಸುವಂತೆ ನನ್ನ ಜನರಿಗೆ ಅಪ್ಪಣೆಕೊಡಬೇಕು. 21 ಅಪ್ಪಣೆಕೊಡದೆ ಹೋದರೆ ನಾನು ನಿನಗೂ ನಿನ್ನ ಪ್ರಜಾಪರಿವಾರದವರಿಗೂ ನಿನ್ನ ಮನೆಗಳಿಗೂ ವಿಷದ ಹುಳಗಳ ಕಾಟವುಂಟಾಗುವಂತೆ ಮಾಡುವೆನು. ಐಗುಪ್ತ್ಯರ ಮನೆಗಳಲ್ಲಿಯೂ ಅವರು ಇರುವ ಎಲ್ಲಾ ಭೂವಿುಯಲ್ಲಿಯೂ ಆ ಹುಳಗಳು ತುಂಬಿಕೊಳ್ಳುವವು. 22 ✽ಆದರೆ ನನ್ನನ್ನೇ ಭೂಲೋಕದಲ್ಲಿ ಆಳುವ ಯೆಹೋವನು ಎಂದು ನೀನು ತಿಳುಕೊಳ್ಳುವಂತೆ ನಾನು ಆ ದಿನದಲ್ಲಿ ನನ್ನ ಜನರು ವಾಸವಾಗಿರುವ ಗೋಷೆನ್ ಸೀಮೆಯನ್ನು ವಿಶೇಷಿಸುವೆನು; ಅಲ್ಲಿ ಆ ಕಾಟವಿರುವದಿಲ್ಲ. 23 ನನ್ನ ಜನಕ್ಕೂ ನಿನ್ನ ಜನಕ್ಕೂ ವ್ಯತ್ಯಾಸ ಮಾಡುವೆನು.✽ ನಾಳೆಯೇ ಈ ಮಹತ್ಕಾರ್ಯವುಂಟಾಗುವದು ಅನ್ನಬೇಕೆಂದು ಹೇಳಿದನು. 24 ಯೆಹೋವನು ಹಾಗೆಯೇ ಮಾಡಿದನು; ವಿಷದ ಹುಳಗಳು ಫರೋಹನ ಅರಮನೆಯಲ್ಲಿಯೂ ಅವನ ಪರಿವಾರದವರ ಮನೆಗಳಲ್ಲಿಯೂ ಸಮಸ್ತ ಐಗುಪ್ತದೇಶದಲ್ಲಿಯೂ ವಿಪರೀತವಾಗಿ ತುಂಬಿಕೊಂಡವು; ಅವುಗಳಿಂದ ದೇಶವು ಹಾಳಾಯಿತು.
25 ✽ಆಗ ಫರೋಹನು ಮೋಶೆ ಆರೋನರನ್ನು ಕರೆಸಿ – ನೀವು ಹೋಗಿ ಈ ದೇಶದೊಳಗೇ ನಿಮ್ಮ ದೇವರಿಗೆ ಯಜ್ಞ ಮಾಡಬಹುದು ಅಂದನು. 26 ಆದರೆ ಮೋಶೆ – ಹಾಗೆ ಮಾಡುವದು ಯುಕ್ತವಲ್ಲ. ನಮ್ಮ ದೇವರಾದ ಯೆಹೋವನಿಗೆ ನಾವು ಯಜ್ಞದಲ್ಲಿ ಕೊಡುವ ಆಹುತಿ ಐಗುಪ್ತ್ಯರಿಗೆ ನಿಷೇಧ. ನಿಷಿದ್ಧವೆಂದು ಐಗುಪ್ತ್ಯರು ತಿಳುಕೊಂಡಿರುವ ಆಹುತಿಯನ್ನು ನಾವು ಅವರ ಕಣ್ಣಿನ ಮುಂದೆ ಮಾಡಿದರೆ ಅವರು ನಮ್ಮನ್ನು ಕೊಲ್ಲುವದಕ್ಕೆ ಕಲ್ಲೆಸೆಯುವರಲ್ಲವೇ. 27 ನಾವು ಅರಣ್ಯದಲ್ಲಿ ಮೂರು ದಿವಸದ ಪ್ರಯಾಣದಷ್ಟು ದೂರ ಹೋಗಿ ನಮ್ಮ ದೇವರಾದ ಯೆಹೋವನು ಆಜ್ಞಾಪಿಸುವ ಪ್ರಕಾರ ಯಜ್ಞಮಾಡಬೇಕು ಅಂದನು. 28 ಅದಕ್ಕೆ ಫರೋಹನು – ಒಳ್ಳೇದು, ಅರಣ್ಯದಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಯಜ್ಞಮಾಡುವಂತೆ ನಿಮಗೆ ಅಪ್ಪಣೆ ಕೊಡುತ್ತೇನೆ; ಆದರೆ ದೂರ ಹೋಗಕೂಡದು; ನನಗೋಸ್ಕರ ಪ್ರಾರ್ಥನೆಮಾಡಿರಿ✽ ಅಂದನು. 29 ಅದಕ್ಕೆ ಮೋಶೆ – ನಾನು ನಿನ್ನ ಬಳಿಯಿಂದ ಹೊರಟಾಗ ಫರೋಹನಾದ ನಿನಗೂ ನಿನ್ನ ಪ್ರಜಾಪರಿವಾರದವರಿಗೂ ಹುಳಗಳ ಬಾಧೆಯು ನಾಳೆಯಿಂದ ಇರಬಾರದೆಂಬದಾಗಿ ಯೆಹೋವನಿಗೆ ಪ್ರಾರ್ಥನೆ ಮಾಡುವೆನು. ಆದರೆ ಯೆಹೋವನಿಗೆ ಯಜ್ಞಮಾಡಲಿಕ್ಕೆ ನೀನು ಜನರಿಗೆ ಅಪ್ಪಣೆ ಕೊಡದೆ ಇನ್ನು ಮುಂದೆ ವಂಚನೆಮಾಡಬಾರದು ಅಂದನು. 30 ಮೋಶೆಯು ಫರೋಹನ ಬಳಿಯಿಂದ ಹೊರಟು ಯೆಹೋವನಿಗೆ ಪ್ರಾರ್ಥನೆಮಾಡಲು, ಅವನ ಪ್ರಾರ್ಥನೆಯ ಮೇರೆಗೆ ಯೆಹೋವನು ಮಾಡಿದನು. 31 ಆ ಹುಳಗಳೆಲ್ಲಾ ಫರೋಹನ ಬಳಿಯಿಂದಲೂ ಅವನ ಪ್ರಜಾಪರಿವಾರದವರ ಬಳಿಯಿಂದಲೂ ತೊಲಗಿಹೋದವು; ಒಂದೂ ಉಳಿಯಲಿಲ್ಲ. 32 ✽ಆದರೂ ಫರೋಹನು ಆಗಲೂ ತನ್ನ ಹೃದಯವನ್ನು ಮೊಂಡುಮಾಡಿಕೊಂಡು ಜನರಿಗೆ ಅಪ್ಪಣೆ ಕೊಡದೆಹೋದನು.

show more

Share/Embed