#ಶತಾಯುಷಿ
AMIN CREATION AMIN CREATION
1.38K subscribers
51 views
0

 Published On Aug 27, 2024

ಶತ ಆಯುಷ್ಯವ ದಾಟಿ ಬದುಕಿನರ್ಥವ ಮೀಟಿ ಜೀವನಾನುಭವಾಮೃತವ ಧಾರೆಯಾಗಿಸಿ ಬಾಳ ಕಡಲ ಒಡಲಾಳವ ಧರೆಯಾಗಿಸಿ ಅರೋಗ್ಯ ಪೂರ್ಣ ನಡೆಗೆ ಮಾದರಿಯಾಗಿ ಸಂಸ್ಕೃತಿ ಸಂಸ್ಕಾರಗಳಿಗೆ ಆದರ್ಶಪ್ರಾಯರಾಗಿ ನಮಗೆಲ್ಲ ಪ್ರೇರಕದಾಯಕರಾಗಿರುವ ಐದು ತಲೆಮಾರಿನ ಶತಾಯುಷಿ ಕುಪ್ಪೆಪದವು ಐನ ಮನೆಯ

" ಶ್ರೀಮತಿ ಸೀತು ಪೂಜಾರ್ತಿ" ಇವರಿಗೆ

ನಮ್ಮ ಸಂಘದ ಮೂಲಕವಾಗಿ ನೆರವೇರುತ್ತಿರುವ ಬ್ರಹ್ಮ ಶ್ರೀ ನಾರಾಯಣ ಗುರುಗಳ 170ನೇ ಜಯಂತಿ ಆಚರಣೆಯ ಸುಸಂದರ್ಭದಲ್ಲಿ ಗೌರವ ಪೂರ್ವಾಕವಾಗಿ ಸಮರ್ಪಿಸುವ,

"ಸನ್ಮಾನ ಪತ್ರ"

ಪ್ರೀತಿ ಪಾತ್ರರೆ,

'ಅಭಿವಾದವ ಶೀಲಸ್ಯ ನಿತ್ಯಂ ವೃದ್ದೋಪ ಸೇವಿನ:
ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾ ಯಶೋ ಬಲಂ'
ಅನ್ನುವಂತೆ ಎಲ್ಲಿ ಹಿರಿ ಜೀವರುಗಳನ್ನು ನಾವು ಆದರಿಸುತ್ತೇವೆಯೋ, ಗೌರವಿಸುತ್ತೇವೆಯೋ,ಅಭಿನಂದಿಸುತ್ತೇವೆಯೋ ಅವಾಗ ನಮ್ಮ ಆಯುಷ್ಯ,ಜ್ಞಾನ,ಯಶಸ್ಸು ವೃದ್ಧಿಸುತ್ತದಂತೆ.ಅಂತಹ ಬಲ ಸಾಮರ್ಥ್ಯವನ್ನು ಹೊಂದಿ ಅದನ್ನು ನಮಗೆ ಸಿಂಚನ ಮಾಡುತ್ತಿರುವ ಹಿರಿ ಜೀವ ತಾವಾಗಿದ್ದೀರಿ.ಸುಮಾರು ಐದು ತಲೆಮಾರುಗಳಿಗೆ ಹಿರಿ ಮುತ್ತಜ್ಜಿಯಾಗಿ ಮಕ್ಕಳು, ಮೊಮ್ಮಕ್ಕಳು,ಮರಿ ಮೊಮ್ಮಕ್ಕಳು, ಮರಿ ಮರಿ ಮೊಮ್ಮಕ್ಕಳು ಹೀಗೆ ಸಂಸಾರದಲ್ಲಿ ಐವತ್ತ ನಾಲ್ಕು ಮಂದಿಯ ಜೀವಸೆಲೆಗೆ ಕಾರಣರಾದವರು ಮತ್ತು ಸುತ್ತಮುತ್ತಲ ಹಾಗೂ ಊರವರ ಪ್ರೀತಿ ಅಭಿಮಾನಕ್ಕೆ ಪಾತ್ರರಾದವರು ತಾವಾಗಿದ್ದೀರಿ.ಪತಿದೇವರಾದ ದಿವಂಗತ ಶ್ರೀ ನೋನು ಪೂಜಾರಿಯವರ ಸಹಧರ್ಮಿಣಿಯಾಗಿ ಜೊತೆಯಾಗಿ ಹೆಜ್ಜೆ ಹಾಕಿ ಸಾಂಸಾರಿಕ, ಕೌಟುಂಬಿಕ ಬದುಕನ್ನು ಸಾಂಪ್ರದಾಯಿಕ ಹಾಗೂ ಸಂಸ್ಕಾರಯುತವಾಗಿ ಮುನ್ನಡೆಸಿಕೊಂಡು ಬಂದು ತಮ್ಮ ಕಿರಿಯರಿಗೆ ಮತ್ತು ನಮಗೆಲ್ಲ ದಾರಿದೀಪವಾದವರು ತಾವಾಗಿದ್ದೀರಿ.ಐದು ತಲೆಮಾರುಗಳ ವಂಶವೃಕ್ಷದ ಗಟ್ಟಿ ಬೇರಾಗಿ ಎಂಟು ಮಕ್ಕಳ ಮಹಾತಾಯಿಯಾಗಿ ಕೃಷಿ ಬದುಕನ್ನು ಸಂಭ್ರಮಿಸಿದವರಾಗಿ ಅಡುಗೆ ಮನೆಯ ಪಾಕ ತಜ್ಞೆಯಾದವರು ನೀವಾಗಿದ್ದೀರಿ.ದೇಶದಲ್ಲೇ ಪ್ರಥಮ ಎನ್ನುವಂತೆ ಇತ್ತೀಚೆಗೆ ಕಿನ್ನಿಗೋಳಿಯಲ್ಲಿ ನಡೆದ ಅಂಚೆ ಇಲಾಖೆಯ ಮಹಿಳಾ ಸಮ್ಮಾನ್ ಕಾರ್ಯಕ್ರಮದಲ್ಲಿ ಈ ಯೋಜನೆಯನ್ನು ಉಚಿತವಾಗಿ ಒಟ್ಟಿಗೆ ಪಡೆದುಕೊಂಡಿದ್ದು ಮತ್ತು ಕೇಂದ್ರ ಸರಕಾರದ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಇವರಿಂದ ಅಭಿನಂದನೀಯ ಟ್ವಿಟ್ ಗೆ ಪಾತ್ರರಾದವರು ತಾವಾಗಿದ್ದಿರಿ. ತನ್ನ ಮೊಮ್ಮಗನೊಂದಿಗೆ ತಾವು ಹಲವು ರೀಲ್ಸ್, ಗಳನ್ನು ಮಾಡುತ್ತಾ ಜೀವನೋತ್ಸವವನ್ನು ಸಾದಾರಪಡಿಸುತ್ತ ಈ ವಯಸ್ಸಿನಲ್ಲೂ ಕಲಾವಿದರೆನಿಸಿಕೊಂಡವರು ನೀವಾಗಿದ್ದೀರಿ.ಇಂದಿಗೂ ತನ್ನ ಕೆಲಸ ಕಾರ್ಯಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಅರೋಗ್ಯ ಪೂರ್ಣ ಬದುಕನ್ನು ಸಾಗಿಸುತ್ತಿರುವ ತಾವು ನಮಗೆಲ್ಲಾ ಆದರ್ಶಪ್ರಾಯರೆಂದೇ ಪರಿಭಾವಿಸುತ್ತಾ ಶ್ರೀ ದೇವರು ತಮ್ಮನ್ನು ಇನ್ನು ಮುಂದಕ್ಕೂ ಇದೇ ಬಗೆಯಲಿ ಅನುಗ್ರಹಿಸುತ್ತಿರಲಿ.ಬ್ರಹ್ಮ ಶ್ರೀ ನಾರಾಯಣ ಗುರುಗಳು ಸದಾ ಹರಸುತ್ತಿರಲಿ ತಾವು ನಂಬಿಕೊಂಡು ಬಂದಿರುವ ದೈವದೇವರುಗಳ ಕೃಪಾಶೀರ್ವಾದ ನಿತ್ಯ ನಿಮ್ಮ ಮೇಲಿರಲಿ ಎಂದು ಆಶಿಸುತ್ತಾ ತಮ್ಮನ್ನು ಹೃದಯ ಸ್ಪರ್ಶಿಯಾಗಿ ಸನ್ಮಾನಿಸುತ್ತಿದ್ದೇವೆ.

ದಿನಾಂಕ :28.08.2024

ಅಭಿನಂದನೆಯೊಂದಿಗೆ

ಅಧ್ಯಕ್ಷರು ಮತ್ತು ಸರ್ವಸದಸ್ಯರ,
ಶ್ರೀ ನಾರಾಯಣ ಗುರು ಸೇವಾ ಸಮಿತಿ ಕುಪ್ಪೆಪದವು

ಸನ್ಮಾನಿಸಿದ ಶ್ರೀ ನಾರಾಯಣ ಗುರು ಸೇವಾ ಸಮಿತಿ

show more

Share/Embed