ರಾಘವಾಂಕ|ಭಾಗ ೪|ಗಾಣರಾಣಿಯರ ಪ್ರಸಂಗ|ಹರಿಶ್ಚಂದ್ರ ಕಾವ್ಯ
Vaishakh Bagee Vaishakh Bagee
5.93K subscribers
16,842 views
347

 Published On Aug 26, 2021

#UPSC #HEJJE #ಹರಿಶ್ಚಂದ್ರಕಾವ್ಯ
ಅಭಿನಯ ಕ್ರಿಯೆಯ ದೃಷ್ಟಿಯಿಂದಲೂ, ವಿಶೇಷತಃ ಸಂವಾದ ದೃಷ್ಟಿಯಿಂದಲೂ ಆ ದೃಶ್ಯ ಅತ್ಯಂತ ನಾಟಕೀಯವಾಗಿದೆ. ವಾಕ್ಯ ಪ್ರತಿವಾಕ್ಯಗಳು, ವಾದ ಪ್ರತಿವಾದಗಳು, ಉಪಮಾನ ಪ್ರತ್ಯುಪಮಾನಗಳು ಹಿಂದಕ್ಕೂ ಮುಂದಕ್ಕೂ ಬಾಣಗಳಂತೆ ವೇಗದಿಂದ ಮಿಂಚುತ್ತವೆ. ಮಾಯದಬಲೆಯರ ವಾದದ ಯುಕ್ತಿಗೆ ಬೆರಗಾಗಿ ಕೈಚಪ್ಪಾಳೆ ತಟ್ಟುವ ನಾವು ಒಡನೆಯೇ ಹರಿಶ್ಚಂದ್ರನ ಪ್ರತಿಯುಕ್ತಿಗೆ ಬೆಕ್ಕಸಗೊಂಡು ಹಿಗ್ಗಿ ಕರತಾಡನ ಮಾಡುತ್ತೇವೆ. ಸಮಬಲರಾದ ಪಟುಭಟರ ದ್ವಂದ್ವಯುದ್ಧದಲ್ಲಿ ಜಯ ಯಾರಿಗೆ, ಸೋಲು ಯಾರಿಗೆ ಎಂಬುದು ಎಂತು ಸಂದೇಹಾಸ್ಪದವಾಗಿರುತ್ತದೆಯೊ ಅಂತೆಯ ನಾವು ಸಂಶಯಗ್ರಸ್ತರಾಗುತ್ತೇವೆ. ಅಯ್ಯೋ ಮಾಯದಬಲೆಯರ ಈ ಮಾತಿಗೆ ದೊರೆ ಏನು ಉತ್ತರವನ್ನು ತಾನೆ ಕೊಡಬಲ್ಲನು? ಎಂದುಕೊಳ್ಳುವಷ್ಟರಲ್ಲಿಯೆ ಆತನ ಸಮಂಜಸವಾದ ಅದ್ಭುತ ಪ್ರತಿಭಾಪೂರ್ಣವಾದ ಉತ್ತರದ ವೈಖರಿಯನ್ನು ನೋಡಿ ಆನಂದದಿಂದ ಕುಣಿದಾಡುತ್ತೇವೆ. ಅಂತಹ ವಾಗ್ಯುದ್ಧಗಳು ಸಾಹಿತ್ಯ ಪ್ರಪಂಚದಲ್ಲಿ ಬಹಳ ನಡೆದಿಲ್ಲ.
-ಕುವೆಂಪು

Join Telegram Channel : https://t.me/HejjeKannada

show more

Share/Embed