#ಆಟಿದ
AMIN CREATION AMIN CREATION
1.38K subscribers
142 views
7

 Published On Jul 29, 2024

ಯುವವಾಹಿನಿ ಬಜಪೆ ಘಟಕದ "ಆಟಿದ ನೆಂಪು" ಕಾರ್ಯಕ್ರಮವು 28.07.2024 ರ ಭಾನುವಾರ ಬಿಲ್ಲವ ಸಂಘ ಬಜಪೆ ಇಲ್ಲಿ ನಾರಾಯಣ ಗುರುವರ್ಯರಿಗೆ ಪೂಜೆ ಸಲ್ಲಿಸುವುದರ ಮೂಲಕ ಪ್ರಾರಂಭವಾಯಿತು.
ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಸುಂಕದಕಟ್ಟೆ ಇಲ್ಲಿಯ ಪ್ರಾಂಶುಪಾಲರು ಅದ ಶ್ರೀಮತಿ ಡಾ.ಲತಾ ಆರ್. ಕೋಟ್ಯಾನ್ ಇವರು ತುಳುನಾಡ ಸಂಸ್ಕೃತಿ ಬಿಂಬಿಸುವ ಚೆನ್ನೆ ಮನೆ ಆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರೊಂದಿಗೆ ಬಜಪೆ ಘಟಕದ ಸಮಾಜಮುಖಿ ಕಾರ್ಯಕ್ರಮದ ಬಗ್ಗೆ ಸ್ಲಾಂಘನಿಯ ಮಾತುಗಳನ್ನಾಡಿದರು.
ಸಂದೇಶ್ ಕುಮಾರ್ ಬಡಗಬೆಳ್ಳೂರು ಇವರು ನಾರಾಯಣ ಗುರುಗಳ ಭಕ್ತಿಗೀತೆಯ ಟ್ರೈಲರ್ ನ್ನು ಬಿಡುಗಡೆಗೊಳಿಸಿ ತದ ನಂತರ ಆಟಿಯ ವಿಶೇಷತೆಯ ಬಗ್ಗೆ ಉಪನ್ಯಾಸ ಮಾಡುತ್ತ ಹಿಂದಿನ ಕಾಲದ ಆಟಿಯ ತಿಂಗಳಿನ ಕಷ್ಟಗಳ ಬಗ್ಗೆ ಈಗಿನ ಯುವ ಪೀಳಿಗೆಗೆ ತಿಳಿ ಹೇಳುವುದು ಹಾಗೂ ಅಳಿವಿನಂಚಿನಲ್ಲಿರುವ ನಮ್ಮ ಸಂಸ್ಕೃತಿಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಮುಖ್ಯ ಅತಿಥಿಗಳಾದ ವಿ. ಜೆ. ಮಧುರಾಜ್ ಖ್ಯಾತ ನಿರೂಪಕರು,ಲೋಕೇಶ್ ಕೋಟ್ಯಾನ್ ಉಪಾಧ್ಯಕ್ಷರು ಯುವವಾಹಿನಿ ಕೇಂದ್ರ ಸಮಿತಿ, ಶಿವರಾಮ್ ಪೂಜಾರಿ ಅಧ್ಯಕ್ಷರು ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಬಜಪೆ -ಕರಂಬಾರು, ರೋಹಿಣಿ ರಾಜೇಶ್ ಕಾರ್ಯದರ್ಶಿ ಯುವವಾಹಿನಿ ಬಜಪೆ, ಕಾರ್ಯಕ್ರಮ ಸಂಚಾಲಕರು ಚಿತ್ತರಂಜನ್ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರಂಜನ್ ಕರ್ಕೇರ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ನಮ್ಮ ಊರಿನ 10 ನೇ ತರಗತಿ ಹಾಗೂ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಈ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನಕ್ಕೆ ಆರ್ಥಿಕವಾಗಿ ಸಹಾಯ ಮಾಡಿದ ಸುಕುಮಾರ್ ಸಾಲ್ಯಾನ್ ಮತ್ತು ಯಶೋಧ ಸುಕುಮಾರ್ ಸಾಲ್ಯಾನ್ ಹಾಗೂ ಸರಿತಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಅದ ವಿನೋಧರ ಪೂಜಾರಿ ಇವರನ್ನು ಗೌರವಿಸಲಾಯಿತು.ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದು ಡಾಕ್ಟರೇಟ್ ಪದವಿ ಸ್ವೀಕರಿಸಿದ ಶ್ರೀಮತಿ ಶಿಲ್ಪಾ ದಿನೇಶ್ ಇವರನ್ನು ಸನ್ಮಾನಿಸಲಾಯಿತು ಹಾಗೂ ಶ್ರೀಮತಿ ಪೂಜಾ ಕಿರಣ್ ಅತ್ತೋಲಿಗೆ ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಅಭಿನಂದಿಸಲಾಯಿತು. ಯುವವಾಹಿನಿ ಸದಸ್ಯರು ಸಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು........

show more

Share/Embed