ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಟ್ಟ ಮಹಿಳಾ ಸ್ವಸಹಾಯ ಗುಂಪು | Woman Empowerment|Bagalkot| Vijay Karanataka
Vijay Karnataka | ವಿಜಯ ಕರ್ನಾಟಕ Vijay Karnataka | ವಿಜಯ ಕರ್ನಾಟಕ
1.33M subscribers
8,006 views
81

 Published On Oct 9, 2021

ಬಾಗಲಕೋಟೆ ಜಿಲ್ಲೆಯ ಸಂಜೀವಿನಿ ಮಹಿಳಾ ಒಕ್ಕೂಟ ಎಂಬ ಹೆಸರಿನ, ಮಹಿಳೆಯರ ಸ್ವಸಹಾಯ ಗುಂಪಿನ ಯಶೋಗಾಥೆ ಖಂಡಿತ ಎಲ್ಲರಿಗೂ ಮಾದರಿ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ನೆರವು ಪಡೆದುಕೊಂಡಿರುವ ಈ ಮಹಿಳೆಯರು, ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇಲ್ಲಿನ ಪ್ರತಿ ಮಹಿಳೆಯೂ ತಿಂಗಳಿಗೆ 20-30 ಸಾವಿರ ರೂ. ಆದಾಯ ಪಡೆದುಕೊಳ್ಳುತ್ತಿದ್ದಾಳೆ.

ಬಾಗಲಕೋಟೆ ಜಿಲ್ಲೆಯ 170 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 6 ಸಾವಿರ ಮಹಿಳಾ ಸ್ವ ಸಹಾಯ ಸಂಘಟನೆ ಇದ್ದು,ಇದರಲ್ಲಿ 68 ಸಾವಿರ ಮಹಿಳೆಯರು ಸದಸ್ಯರಿದ್ದಾರೆ. ಈಗಾಗಲೇ 1,081ಮಹಿಳಾ ಸಂಘಗಳಿಗೆ 9.50 ಕೋಟಿ ಅನುದಾನ ನೀಡಲಾಗಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಟಗೇರಿ ಗ್ರಾಮದಲ್ಲಿರುವ ಸಂಜೀವಿನಿ ಒಕ್ಕೂಟದ ಸದಸ್ಯೆಯರೂ ಕೂಡ ಗೃಹೋಪಯೋಗಿ ವಸ್ತುಗಳು ತಯಾರು ಮಾಡುತ್ತಿದ್ದು, ಆರ್ಥಿಕವಾಗಿ ಸದೃಡರಾಗಿದ್ದಾರೆ. ಅಲಂಕಾರ ವಸ್ತುಗಳು, ಉತ್ತರ ಕರ್ನಾಟಕದ ರುಚಿ ರುಚಿಯಾದ ಜೋಳದ ಖಡಕ್ ರೊಟ್ಟಿ, ವಿವಿಧ ರೀತಿಯ ಚಟ್ನಿ, ಸಿಹಿ ತಿಂಡಿ‌ ಪದಾರ್ಥಗಳನ್ನು ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ.

ಒಟ್ಟಿನಲ್ಲಿ ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯುತ್ತಿರುವಈ ಮಹಿಳಾ ಸ್ವಸಹಾಯ ಗುಂಪು, ಮಹಿಳೆಯರ ಸ್ವಾವಲಂಬಿ ಬದುಕಿಗೆ ಉದಾಹಣೆಯಾಗಿದೆ.

#Bagalkot #Woman #WomanEmpowerment


Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

show more

Share/Embed