ಕಡಿಮೆ ನಿದ್ದೆ ಮಾಡಿದರೆ ಏನಾಗುತ್ತೆ ಗೊತ್ತಾ? | Dr. B M Hegde's on Importance of Sleep | Saral Jeevan
Saral Jeevan Saral Jeevan
551K subscribers
260,565 views
5K

 Published On Aug 26, 2022

ಕಡಿಮೆ ನಿದ್ದೆ ಮಾಡಿದರೆ ಏನಾಗುತ್ತೆ ಗೊತ್ತಾ? | Dr. B M Hegde's on Importance of Sleep | Saral Jeevan

ಸಂರ್ಪೂಣ ನಿದ್ದೆ ಆದರೆ ಮನುಷ್ಯನ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಮನಸ್ಸು ಉಲ್ಲಾಸದಾಯಕವಾಗಿರುತ್ತದೆ. ಯಾವುದೇ ಕೆಲಸ ಮಾಡಲು ಜೋಶ್ ಬರುತ್ತೆ. ಇಡೀ ದಿನ ಫುಲ್ ಆ್ಯಕ್ಟೀವ್ ಆಗಿರುತ್ತೇವೆ. ಹಾಗಿದ್ದರೆ ಯಾವ ವಯಸ್ಸಿಗೆ ಎಷ್ಟು ಸಮಯ ನಿದ್ದೆ ಮಾಡಬೇಕು ಅಂತ ನಿಮಗೆ ಗೊತ್ತಾ? ಅದರ ಬಗ್ಗೆಯೂ ಇಲ್ಲಿದೆ ವಿವರ.

ಈ ಫಾಸ್ಟ್ಪುಡ್(Fast Food) ಜಮಾನದಲ್ಲಿ ಎಲ್ಲವೂ ಫಾಸ್ಟ್ ಆಗಿ ಓಡುತ್ತಿರುತ್ತೆ. ಸಮಯ(Time) ಕೂಡ ಹಾಗೇ ಸರಿಯಾಗಿ ಬಳಸಿಕೊಳ್ಳದಿದ್ದರೆ, ಕಣ್ಣಿನ ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ಮುಗಿದಿರುತ್ತೆ. ಉದಾಹರಣೆ ಕೆಲಸ ಮಾಡುವಾಗ ಉತ್ಸಾಹದಿಂದ ಮಾಡದಿದ್ದರೇ, ಸಮಯಕ್ಕೂ ಮೀರಿ ಕೆಲಸ ಮಾಡಬೇಕಾಗುತ್ತೆ. ಊಟ ಮಾಡುವ ಸಮಯದಲ್ಲಿ ಸರಿಯಾಗಿ ಮಾಡದಿದ್ದರೆ ಆರೋಗ್ಯ ಸಮಸ್ಯೆಗಳು(Health Issues) ಕಾಣಿಸಿಕೊಳ್ಳುತ್ತವೆ. ಹಾಗೆ ನಿದ್ದೆ(Sleep) ಕೂಡ ಸರಿಯಾದ ಸಮಯಕ್ಕೆ ಮಾಡಬೇಕು. ಇಲ್ಲವಾದರೆ ನಿಮಗೆ ತಿಳಿಯದೆ ನಿಮ್ಮ ದೇಹ(Body)ದಲ್ಲಿ ಬದಲಾವಣೆ(Changes)ಗಳು ಆಗುತ್ತಿರುತ್ತವೆ. ಈ ಒತ್ತಡ(Stress)ದ ಜೀವನದಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುವವರ ಸಂಖ್ಯೆ ಅತಿ ವಿರಳ. ಕೆಲವರು ಮಧ್ಯರಾತ್ರಿ 1ರ ನಂತರ ಮಲಗಿ, ಬೆಳಗ್ಗೆ ಮತ್ತೆ 6 ಗಂಟೆಗೆ ಎದ್ದು ಕೆಲಸಕ್ಕೆ ಓಡುತ್ತಿರುತ್ತಾರೆ. ಇನ್ನೂ ಕೆಲವರು ರಾತ್ರಿಯೆಲ್ಲ ಟಿವಿ(TV), ಮೊಬೈಲ್(Mobile)ನಲ್ಲಿ ಕಾಲ ಕಳೆಯುತ್ತಾ ನಿಧಾನವಾಗಿ ಮಲಗಿ, ಮತ್ತೆ ಬೇಗ ಎದ್ದು ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಅದೆಷ್ಟೋ ಜನರ ಪಾಲಿಗೆ ನೆಮ್ಮದಿ ನಿದ್ದೆ ಎಂಬುದು ಮರೀಚಿಕೆಯಾಗಿದೆ. ಇದರ ಬಗ್ಗೆ ವಿವರಣೆ ನೀಡಿದ್ದಾರೆ ಖ್ಯಾತ ವೈದ್ಯ ಡಾ ಬಿ ಎಮ್‌ ಹೆಗ್ಡೆ.

#insomnia #drbmhegde #sleep #nimmaarogyanimmakaiyalli #saraljeevan #ನಿದ್ರೆ #ಆರೋಗ್ಯ #ಸರಳಜೀವನ

show more

Share/Embed