ರಾಮಾಶ್ವಮೇಧ - ಮುದ್ದಣ (ಮುದ್ದಣ-ಮನೋರಮೆಯರ ಸರಸ ಸಲ್ಲಾಪ)॥Ramashwamedha -Muddanna॥ ಕನ್ನಡ ವೈಶಾಖ ೩॥
BTV KANNADA CLASS BTV KANNADA CLASS
11.6K subscribers
19,128 views
479

 Published On Jan 30, 2023

*ಕವಿ ಪರಿಚಯ:
ಹೆಸರು:ನಂದಳಿಕೆ ನಾರಾಯಣಪ್ಪ
ಕಾಲ:1870-1901
ಸ್ಥಳ:ನಂದಳಿಕೆ (ಉಡುಪಿ)
ತಂದೆ: ಪಾಠಾಳಿ ತಿಮ್ಮಪ್ಪಯ್ಯ ತಾಯಿ;ಮಹಾಲಕ್ಷ್ಮೀ
ಕಾವ್ಯನಾಮ:ಮುದ್ದಣ
ಕೃತಿಗಳು:ಶ್ರೀರಾಮಪಟ್ಟಾಭಿಷೇಕ, ರತ್ನಾವತೀ ಕಲ್ಯಾಣ, ಕುವರ ವಿಜಯ, ಶ್ರೀರಾಮಾಶ್ವಮೇಧ ಮತ್ತು ಅಧ್ಭುತ ರಾಮಾಯಣ..

*ಆಶಯ:
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮುದ್ದಣನಿಗೆ ವಿಶಿಷ್ಟ ಸ್ಥಾನಗಳಿಸಿ ಕೊಟ್ಟಿರುವುದು. 'ರಾಮಾಶ್ವಮೇಧ'ವೆಂಬ ಗದ್ಯಕೃತಿ. ಇದರ ಕಥಾ ವಸ್ತುವನ್ನು ಪದ್ಮ ಪುರಾಣದಲ್ಲಿ ಅಂತರ್ಗವಾದ ಶ್ರೇಷ್ಠ ರಾಮಾಯಣದಿಂದ ತೆಗೆದುಕೊಳ್ಳಲಾಗಿದೆ. ಇಲ್ಲಿ ಬರುವ ಮುದ್ದಣ ಮನೋರಮೆಯರ ಸಂವಾದದಲ್ಲಿ ಕವಿ ತನ್ನ ಸ್ವಂತಿಕೆಯನ್ನು ಮೆರೆದಿದ್ದಾನೆ. ಮಳೆಗಾಲದ ವರ್ಣನೆಯಿಂದ ಕಥೆ ಪ್ರಾರಂಭವಾದೊಡನೆಯೇ ಓದುಗನಿಗೆ ಪ್ರಾಚೀನ ಸಾಹಿತ್ಯದಿಂದ ಹೊಸ ಸಾಹಿತ್ಯದ ನಾಡಿಗೆ ಕಾಲಿಟ್ಟ ಅನುಭವವಾಗುತ್ತದೆ. ಕಾವ್ಯದ ಆರಂಭದಲ್ಲಿಯೂ ನಡುನಡುವೆಯೂ ಬರುವ ಅವರ ಸಂವಾದವು ನಗೆಯ ಬುಗ್ಗೆಯನ್ನುಕ್ಕಿಸುತ್ತದೆ. ಮನೋರಮೆಯು ಓದುಗರ ಪ್ರತಿನಿಧಿಯಾಗಿ ಕೃತಿ ವಿಮರ್ಶೆ ಮಾಡುತ್ತಾಳೆ. 'ಪದ್ಯಂ ವದ್ಯಂ, ಗದ್ಯಂ ಹೃದ್ಯಂ' ಎಂಬ ಮನೋರಮೆಯ ಮಾತು ಹೊಸಗನ್ನಡ ಸಂದರ್ಭದ ಗದ್ಯದ ಪ್ರಾಧಾನ್ಯತೆಯನ್ನು ಹೇಳುವಂತಿದೆ.

show more

Share/Embed