🌹ದೇವೀ ಪೂಜೆ -6🌹: 🚩☀️ಶ್ರೀ ಲಲಿತಾ ಪೂಜೆ ☀️:🦜 Description ನೋಡಿ
Jai Srimatha Jai Srimatha
101K subscribers
76,380 views
791

 Published On Jul 3, 2021

☀️ಲಲಿತಾ ಪೂಜೆಯ ಕನ್ನಡ ಮಂತ್ರ
-----------===----------

🌺ಮಂಗಳ ಶ್ಲೋಕ🌺
ಶ್ರೀಗುರುವಿನಡಿಗೆರಗಿ ಗಣಪತಿಗೆ ತಲೆಬಾಗಿ|
ಶಾರದೆಗೆ ಸೆರಗೊಡ್ಡಿ ಬೇಡುತೀಗ|
ಸಾಗರಾವೃತ ಭೂಮಿಗಾಧಾರ ಶಕ್ತಿ|
ಸಂಪನ್ನೆ ದೇವಿಯ ಪೂಜೆ ಮಾಳ್ಪೆನೀಗ ||1||
🙏ಧ್ಯಾನ🙏
ಶ್ರೀ ಲಲಿತೆ ಶುಭಗಾತ್ರೆ ಸರಸಿಜೋಪಮ ನೇತ್ರೆ|
ಕೋಟಿ ಸೂರ್ಯಪ್ರಭೆಯ ದೇವಿ ನೀನು||
ಲಾಲಿಸುತ ಪೊರೆಯಮ್ಮ ಲೋಕ ಮೂರರ ಮಾತೆ|
ಎಂದು ಧ್ಯಾನಿಸುತಿರುವೆನೀಗ ನಾನು || 2 ||
🔥ಆವಾಹನ:-
ವಿಶ್ವವಂದಿತೆ ದೇವಿ ಸಕಲಕಾಧಾರೆ ನೀನೆಂದು ನಮಿಸುವೆ ನಿನ್ನ ಚರಣಯುಗವ||
ವಿಶ್ವತೋಮುಖರೂಪೆಗಾವಾಹನೆಯ ಮಾಳ್ಪ |
ಧೈರ್ಯವಂ ಕ್ಷಮಿಸೆಂದು ಬೇಡುತಿರುವೆ || 3 ||
💮ಆಸನ:-
ನಿನ್ನ ಸೂತ್ರದೊಳಿಹುದು ಸೂತ್ರನಾಟಕವೆಲ್ಲ ನೀನಿರುವೆ ವಿಶ್ವಕಾಧಾರವಾಗಿ ||
ಸನ್ನುತಾಂಗಿಯೆ ನಿನಗೆ ಆಸನವನೆಂತಿಡಲಿ|
ಪೇಳಿ ಪಾಲಿಪುದೆನ್ನ ಲೋಕಮಾತೆ ||4||
👣ಪಾದ್ಯ:-
ಪಂಕಜೋದ್ಭವೆ ದೇವಿ ವಾಗ್ದೇವಿ ಗಿರಿಜಾತೆ|
ಪಾಕಶಾಸನವಂದ್ಯ ಪಾದಪದ್ಮೆ||
ಬಿಂಕವೆಲ್ಲವ ಬಿಟ್ಟುಪಾದ್ಯವನ್ನರ್ಪಿಪೆನು
ಸರ್ವಮಂಗಳೆ ನಿನ್ನ ಚರಣಕೀಗ||5||
🤲ಅಘ್ರ್ಯ
ಅಭಯ ಹಸ್ತವ ನೀಡು ಕಮಲಾಕ್ಷಿ ದೇವಿ ನೀನುರುತರದ ಪ್ರೇಮದಿಂ ಪೊರೆಯುತೆನ್ನ ||
ಸಭಯಭಕ್ತಿಯೀಗಳರ್ಪಿಸುವ ಅಘ್ರ್ಯವಂ|
ಸ್ವೀಕರಿಸಿ ಪೊರೆಯಮ್ಮ ಲೋಕಮಾತೆ||6||
💧ಆಚಮನ
ವಿಮಲ ಗಂಗಾದೇವಿ ಪಾಪನಾಶಕತೇಜೆ|
ಸರ್ವಪಾವನರೂಪೆ ಪುಣ್ಯಜನನಿ||
ಕಮಲಾಕ್ಷಿದೇವಿ ನಾನಾಚಮನವನ್ನರ್ಪಿಸುವೆ|
ಪಾಪಪುಣ್ಯವ ಮರೆಸಿ ಪೊರೆಯೆ ತಾಯೆ||7||
💦ಸ್ನಾನ
ಪಂಚತತ್ವದ ದೇಹವಿಂದು ನಿನಗರ್ಪಿಸುವೆ,
ವಂಚನೆಯಿಲ್ಲದೆ ನಿನ್ನ ಪಾದದೆಡೆಗೆ
ಸಂಚಿತ ಪ್ರಾರಬ್ಧವೆಂಬ ಪಂಚಾಮೃತವ|
ನಂತರಂಗದ ಭಾವಶುದ್ಧ್ದಿಯಿಂದ||8||
ಶುದ್ಧಸತ್ವಳು ನೀನು ಬದ್ಧಸತ್ವಳು ನಾನು
ಬುದ್ದಿಹೀನಳ ಸಲಹು ಪರಮ ಮಾತೆ||
ಸದ್ದರ್ಮಸಾಮ್ರಾಜ್ಯಪದವಿಯೊಳು ನಿಲಿಸೆಂದು|
ಸ್ನಾನ ಮಾಡಿಸುತಿರುವೆ ದೇವಿ ನಿನಗೆ ||9||
🧶ವಸ್ತ್ರ ಸಮರ್ಪಣೆ:
ಜಗದಂಬೆ ಲಲಿತಾಂಬೆ ದೇವ ದೇವನ ಬೊಂಬೆ|
ಮೂಲೋಕವಾವರಿಸಿದಂಬರಾಖ್ಯೆ||
ಮುಗುಳುನಗೆಯೊಳಗೆನ್ನ ವಸ್ತ್ರಸೇವೆಯನೊಪ್ಪಿ|
ಸೌಭಾಗ್ಯ ಸುಖವಿತ್ತು ಪೊರೆಯೆ ತಾಯೆ ||10||
🎇ಕಂಚುಕ-ಆಭರಣ ಸಮರ್ಪಣೆ:
ಮಾನಮರ್ಯಾದೆಗಳ ರೀತಿನೀತಿಗಳೆಲ್ಲ
ಮಾನವರ ನಾಟಕದೊಳಂಗವೆಂಬ||
ಮಾನಸೋನ್ನತಿಯಿತ್ತು ಪೊರೆಯಬೇಕೆಂದೆನುತ|
ಕಂಚುಕವನರ್ಪಿಸುವೆ ತಾಯೆ ನಿನಗೆ ||11||
🌹ಮಂಗಳದ್ರವ್ಯ-ಅರಿಶಿನ ಮತ್ತು ಕುಂಕುಮ:
ಪರಮಮಂಗಳೆ ನೀನು ಶಿವಶಕ್ತಿ ಪರಿಪೂರ್ಣೆ|
ಸೌಭಾಗ್ಯ ಸಂಪದವ ನೀಡೆನುತಲಿ||
ಅರಿಶಿನ-ಕುಂಕುಮ
ಅರಿಶಿನವ ಕುಂಕುಮವನೀಡುತಿಂದು ಪೂಜಿಸುವೆ
ದಾರಿದ್ರಯ ನಾಶಿನಿಯೆ ಲೋಕಮಾತೆ
🌺ಚಂದ್ರ - ಕೇಸರಿ ಸಮರ್ಪಣೆ:
ಸಿಂಧು ಸಂಭವೆ ದೇವಿ ಕರುಣಾಸಿಂಧು|
ಸೀಂಧು ಶಯನನ ಪಟ್ಟದರಸಿಯೆಂದು||
ಸಿಂಧೂರವನ್ನಿಡುವೆ ಪಾಪಸಿಂಧುವಿನಿಂದ|
ಲೆನ್ನ ಕೈಹಿಡಿದೆತ್ತಿ ಪೊರೆಯೆ ತಾಯೆ||13||
🌻ಗಂಧ - ಸಮರ್ಪಣೆ:
ವಾಸನಾಕ್ಷಯ ರೂಪೆ ಅಪವರ್ಗಸುಖದಾತೆ|
ಸತ್ಚಿತ್ಸುಆನಂದ ಪೂರ್ಣರೂಪೆ|
ವಾಸನಾದ್ರವ್ಯವನ್ನಿಡುವೆ ನಿರ್ವಾಸನೆಯ|
ಸುಖವನ್ನು ಕೊಡುವೆಯೆಂದು ದೇವಿ ನಿನಗೆ ||14||
🌷ಅಕ್ಷತೆ-ಸಮರ್ಪಣೆ:
ಅಕ್ಷತೆಯನ್ನರ್ಪಿಸುವೆ ಅಂಬುಜಾಕ್ಷಿಯೆ ದೇವಿ|
ಕಂಜನಾಭನ ರಮಣಿ ಪೂಣ್ಪ್ರಜ್ಞೆ|
ಅಕ್ಷಯದ ಸುಖವಿತ್ತು ಸುಕ್ಷೇಮದಿಂದೆಮ್ಮ|
ರಕ್ಷಣೆಯ ಮಾಡಮ್ಮ ದೇವಿ ಸುಭಗೆ ||15||
🌼💐ಪುಷ್ಪ - ಹೂವು ಸಮರ್ಪಣೆ:
ಪುಷ್ಪದೊಳಗಡಗಿರ್ಪ ಪರಿಮಳದ ಸೌಗಂಧ|
ಶಕ್ತಿರೂಪಳೆ ನಿನಗೆ ವಂದಿಸುತಲಿ||
ಬಾಷ್ಪಲೋಚನಳಾಗಿ ಪ್ರೇಮಪೂರಿತ ಹೃದಯ|
ಪುಷ್ಪವನ್ನರ್ಪಿಸುವೆ ದೇವಿ ನಿನಗೆ|| 16||
☀️ಧೂಪ- ಗಂಧದ ಕಡ್ಡಿ:
ಸತ್ಕರ್ಮ ಸದ್ದರ್ಮ ಸೌಗಂಧಯುಕ್ತದಾ|
ಶ್ರದ್ಧೆ-ಭಕ್ತಿಯೊಳಿಟ್ಟ ಮನಸಿನಿಂದ|
ಸತ್ಕರಿಸಿ ಕೊಡುತಿರುವೆ ಪಾಪಪುಣ್ಯವ ನಿನಗೆ|
ಧೂಪರೂಪದೊಳಿಂದು ಪೊರೆಯೆ ತಾಯೆ|| 17||
✨️ದೀಪ-ಸಣ್ಣ ಮಂಗಳಾರತಿ
ಕೋಟಿ ಸೂರ್ಯಪ್ರಭೆಯ ಚಿಚ್ಛಕ್ತಿರೂಪಿನೀ|
ಪರಬೊಮ್ಮನಾಧಾರವಲ್ತೆ ದೇವಿ|
ಸಾಟಿಯಲ್ಲವು ನಿನಗೆ ನಾನಿಡುವ ದೀಪದಾ|
ಮಂಕು ಬೆಳಕಿದ ನೋಡಿ ನಗುವೆ ತಾಯೆ ||18||
🥥ನೈವೇಧ್ಯ
ಅನ್ನಪೂರ್ಣಾದೇವಿ ವಾತ್ಸಲ್ಯಪರಿಪೂರ್ಣೇ|
ಜೀವಮಾತ್ರರಿಗನ್ನವಿಡುವ ತಾಯೆ|
ಅನ್ನವನು ಮುಂದಿಟ್ಟು ಮಗುಳೆ ಕೊಂಡೊಯ್ಯುತಿಹ|
ನೈವೇಧ್ಯ ನಗೆಗೆಡಿದಲ್ತೆ? ಪೇಳೌ||19||
🍃ತಾಂಬೂಲ-ಎಲೆ ಅಡಿಕೆ
ಸೌಂದರ್ಯ ಗುಣರೂಪೆ ಸತ್ಕಾಮ ಪರಿಪೋಷೆ|
ಸೌಂಧರ್ಯದಧಿದೇವಿ ಮದನಮಾತೆ||
ಸೌಂದರ್ಯ ಸೌಭಾಗ್ಯ ವೃದ್ಧಿಮಾಳ್ಪಾ |
ಪಚ್ಚಕರ್ಪೂರ ವೀಳ್ಯವನ್ನರ್ಪಿಸುವೆನು||20||
🔥ನೀರಾಜನ-ಮಂಗಳಾರತಿ
ಪಂಚವಿಷಯಗಳೀಂದ ಕೂಡಿದಿಂದ್ರಿಯಚಯವ|
ನುರಿಸುತ್ತಲಿಂದು ಜ್ಞಾನಾಗ್ನಿಯೊಳಗೆ||
ಪಂಚಾರತಿಯ ಮಾಡಿ ಬೇಡಿಕೊಂಬುವೆ ದೇವಿ|
ಭವತಾಪಪರಿಹಾರೆ ಭಕ್ತವರದೆ ||21||
🌷💐ಪುಷ್ಪಾಂಜಲಿ - ಹೂ ಮತ್ತು ಅಕ್ಷತೆ ಸಮರ್ಪಣೆ
ಜನ್ಮಜನ್ಮಾಂತರದಿ ನಾ ಗೈದ ಪಾಪ|
ಸಂಚಯವೆಲ್ಲ ನಿನ್ನಡಿಯೊಳಿಡುತಲೀಗ|
ಜನನಮರಣದ ನಾಶಗೈವ ನಿನ್ನುಡಿಯಲ್ಲಿ ಅರ್ಪಿಸುವೆ |
ಪುಷ್ಪದಂಜಲಿಯ ನಾನು ||22||
🌎ಪ್ರದಕ್ಷಿಣೆ
ಎಲ್ಲ ಕಡೆಯಲಿ ನೀನೆ ಎಡದಿ ಬಲದಿ ನೀನೆ|
ನಿನ್ನ ಸುತ್ತಲು ತಿರುಗಲೆಂತುಟಹುದು|
ಎಲ್ಲ ರೂಪದ ನಿನ್ನ ಸುತ್ತಲರಿಯದೆ ನಾನು|
ನನ್ನ ಸುತ್ತಲು ತಿರುಗುತಿಹೆನು ||23||
🧎 ನಮಸ್ಕಾರ:- 🧎‍♀️
ಜ್ಞಾನರೂಪಳೆ ಜಯತು ಜಯತು ಜ್ಞಾನಭೋದೆ|
ಭಕ್ತವತ್ಸಲೆ ದೇವಿ ಜಯತು ಜಯತು ||
ಜ್ಞಾನಕರ್ಮವು ಭಕ್ತಿಯೆಂಬ ದಾರಿಯೊಳಗೆ|
ನೈಜ ಜ್ಞಾನವನೀವ ತಾಯಿ ಜಯತು ಜಯತು ||24||
🙏ಕೈ ಮುಗಿದು ಕೇಳಿಕೊಳ್ಳುವುದು:
ನಾನು ಏನನು ಅರಿಯೆ ನೀನು ಎಲ್ಲವನರಿವೆ |
ನಾನು ನನ್ನದಿದೆಂಬ ಭಾವ ಮರೆಸಿ||
ನೀನೀಗಲೆನ್ನ ನಿನ್ನುಡಿಯಲ್ಲಿ ಹಾಕಿಕೋ|
ಡಭಿಮಾನ ಬಿಡುವಂತೆ ಮಾಡು ತಾಯೆ ||25||
ಜಯತು ಕರುಣಾಸಾಂದ್ರೆ ಜಯತು ಮಂಗಳರೂಪೆ
ಜಯತು ಜಯ ಮಹದಾದಿ ಮಾಯೆ ಜಯತು||
ಜಯತು ದೇವರದೇವಿ ಶ್ರೀ ಚಿದಂಬರರೂಪೆ|
ನೀಡು ನೀನೆಗೀಗ ಸಕಲ ಸುಖವ|| 26
ತಪ್ಪುನೆಪ್ಪುಗಳೆಲ್ಲ ಕಾಪಾಡು ತಾಯೆ ನೀ|
ಕ್ಷಮಿಸುತೆನ್ನಪರಾಧ ಸಂಚಯವನು ||
ತಪ್ಪು ಮಾಡದ ಬುದ್ಧಿ ಪಾಲಿಸುತ್ತಲಿ ಎನ್ನ |
ಪೊರೆ ಕರುಣದಾ ಮಾತೆ ದಾತೆ ||27||
🌑ದೇವಿ ಕಣ್ಣಿಗೆ ಕಪ್ಪಿಡುವುದು
ಕಪ್ಪು ದುಃಖವು ಸುಖವಿದೆಂಬ ಭಾವವು ಕಪ್ಪು|
ಜನ್ಮಜನ್ಮಾಂತರದ ಪಾಪ ಕಪ್ಪು||
ಕಪ್ಪು ಬಾಲ್ಯದ ಭ್ರಾಂತಿ ಯೌವನದ ಸುಖದೀಚ್ಛೆ|
ಯಿಂದ ಕೂಡಿದಮನವದದುವೆ ಕಪ್ಪು|| 28||
ಕಪ್ಪೆಚಿಪ್ಪನು ಬೆಳ್ಳಿಯೆಂದು ತಿಳಿವುದೆ ಕಪ್ಪು|
ಕತ್ತಲೆಯು ಬೆಳಕೆಂಬ ಭ್ರಾಂತಿ ಕಪ್ಪು||
ಕಪ್ಪು ಹಗ್ಗದೊಳಿಪ್ ಸರ್ಪರಾಜನ ಭ್ರಾಂತಿ|
ಜಗದಿ ದೇವನ ಕಾಣದಿಹುದೆ ಕಪ್ಪು||29||
ಹರಿಯು ಹರನೆಂತೆಂಬ ಭೇದಭಾವದಿ|
ಲೋಕಕೀಶದೇವನ ಮರೆವುದದುವೆ ಕಪ್ಪು||
ಗುರುದೇವನಂಘ್ರಿ ಪಂಕಜದ ಭಜನೆಯ ಮರೆತು |
ವಾದ ಮಾಡುವ ಬುದ್ಧಿಯದುವೆ ಕಪ್ಪು || 30 ||
ನೀರಿನಿಂದಲೆ ಬೇರೆಯಾಗಿ ತೋರುವ ಗುಳ್ಳೆ|
ರೂಪಬೇಧÀದಿ ನಿಜವ ಮರೆಸುವಂತೆ||
ತೋರಿ ಭ್ರಾಂತಿಯ ನೀವಜಗವೆ ನೀನೆಂತೆಂಬ||
ನಿಜವ ಮರೆಸುವುದದುವೆ ದೊಡ್ಡಕಪ್ಪು ||30||
ಕಪ್ಪದೊಂದೇ ಜಗದಿ ನಾಟ್ಯವಾಡುತ ನರನ |
ಕೋತಿಯಂದದಿ ಕುಣಿಸುತಿರುತಲಿಹುದು ||
ಕಪ್ಪು ಕಣ್ಣನು ಮುಚ್ಚುತೆನ್ನ ಮನವನು ಶತ್ರು|
ದುರ್ಗ ಮಧ್ಯದಿ ಬಂಧಿಸಿಹುದು ತಾಯೆ ||32||
ಇಂತು ತೋರುತ್ತಲೆನ್ನ ಮನವ ಮೋಹಿಪ|
ಕಪ್ಪಿನೊಳಗೆ ಬೆರೆಸುತಲೀಗ ಜ್ಞಾನರಸವ||
ಸಂಪಸದಿ ಕಾಡಿಗೆಯ ಮಾಡಿ ನಾನರ್ಪಿಸುವೆ |
ಕಂಜಲೋಚನೆ ನಿನ್ನ ನೇತ್ರಯುಗಕೆ|| 33||
🤲ಪ್ರಸಾದ ಕೇಳುವುದು-ಕೋರಿಕೆ ಸಲ್ಲಿಸುವುದು🤲:-
ಪ್ರೇಮಪುಷ್ಪವ ನೀಡು ಜಗದಂಬೆ ಎನಗೀಗ|
ಲಕ್ಷಯದ ಸೌಖ್ಯವನು ಬೇಡುತಿಹೆನು ||
ನೇಮದೊಳು ನಿನ್ನಲಿ ಖಂಡವಿಲ್ಲದ ಭಕ್ತಿ |
ವೈರಾಗ್ಯ ವಿಷಯದೊಳು ಪುಟ್ಟಿಸಮ್ಮ ||ಆರೋಗ್ಯವೈಶ್ರ್ಯದಧಿಕಾರ ಸಂಪತ್ತು
ಪಾಪ-ಪುಣ್ಯವಿಚಾರಬುದಿ-್ಧಯೊಡನೆ |
ನಾರಾಯಣಂಘ್ರಿ ಪದ್ಮದೊಳಿಟ್ಟ ಮನವ

show more

Share/Embed