Published On Oct 5, 2024
ತಾಯೆ ಲಕ್ಷುಮಿ ದೇವಿಯೇ | ನೀನೇ ಗತಿ ತಾಯೆ ಲಕ್ಷುಮಿ ದೇವಿಯೇ ॥ ಪ ॥
ಕಾಯ ಮಮತೆಯ ಕಳೆದು ಬೇಗನೆ | ತೋಯಜಾಕ್ಷನ ತೋರಿ ಪೊರೆಯುವ
ದಾಯ ನಿನ್ನದು ತಾಯೆ ಶ್ರೀಹರಿ | ಪ್ರೀಯೆ ನಿನ್ನನು ನಮಿಸಿ ಬೇಡುವೆ || ಅ.ಪ.|
ಗೋಪಿ ನಂದನೆ ಹೇ ದುರ್ಗೇ | ಕಠೋರೆ ಉಗ್ರೆ ತಾಪತ್ರಯಗಳ ವಿನಾಶೇ | ಮೋಕ್ಷ ಪ್ರದಾತೇ ||ಶ್ರೀಪತಿಯ ಪಾದಾಬ್ಬ ಮಧುಪೆ | ಪಾಪಹರ ತವ ಪತಿಯ ನಾಮವ ಪ್ರಾಪಿಸುತ ದಿನದಿನದಿ ಯನ್ನನು | ಕೈ ಪಿಡಿದು ಕಾಪಾಡು ದೇವಿ || 1||
ಸರಸಿಜ ಭವ ವಂದಿತೇ | ತ್ರಿಜಗನ್ಮಾತೆ ಹರಿಗೆ ಸಮಾಸಮವ್ಯಾಪ್ತಿ | ಹರಿಯಂಕ ಸಂಸ್ಥೆ ।। ಅರಿದರಾಂಕುಶ ಪರಶು ಶಕ್ತಿ | ಧರಿಸಿ ಮೆರೆಯುವ ಹರಿಯ ರಾಣಿಯೆ ವಾರೆ ನೋಟದಿ ಬ್ರಹ್ಮ ಭವರಿಗೆ | ವರ ಸುಪದವಿಗಳಿತ್ತು ಪೊರೆವಳೆ || 2 ||
ಮಾರ ಜನನಿ ಸುಂದರೀ | ಎನ್ನನು ಪೊರೆವ ಭಾರ ನಿನ್ನದು ಅಸುರಾರೀ | ಕೇಳಮ್ಮ ದೇವೀ ||ಕ್ರೂರ ದೈತ್ಯರ ಬಾಧೆ ಹರಿಸಿ |
ಘೋರ ಭವ ದುರಿತಾಬಿ ದಾಟಿಸಿ ಧೀರ ಗುರು ಗೋವಿಂದ ವಿಠಲನ |
ಚಾರು ಚರಣವ ತೋರು ಎನಗೆ || 3 ||
show more