Yellamma Devi Nam Dyavaru/ ಎಲ್ಲಮ್ಮ ದೇವಿ / Dasarapada / Vadirajaru / Roopashree Prabhanjan / Folk sty
RoopashreePrabhanjan RoopashreePrabhanjan
744 subscribers
5,714 views
162

 Published On Aug 25, 2024

ಸರ್ವ ವಿದ್ಯಾ ಪಾರಂಗತರಾದ ಶ್ರೀ ವಾದಿರಾಜ ಗುರುಸಾರ್ವಭೌಮರು ಜನಪದ ಶೈಲಿಯನ್ನು ಕೂಡ ಅಳವಡಿಸಿದ್ದರು . ಇದು ಒಂದು ದಶಾವತಾರದ ದಾಸರಪದವಾಗಿದೆ
Yellamma Devi Nam dyavaru means its questioning to Devi or any lady that Where is my God and explaining about his Dashavatara.

( ಹಾಡಿನ ಸಾಹಿತ್ಯ)

ಎಲ್ಲಮ್ಮ ದೇವಿ ನಮ್ ದ್ಯಾವರು ಬಂದರು ಕಾಣಾ/ಪ/

ಸೋಮಾಸುರ ನೆಂಬ ದೈತ್ಯನು ಸಾಮಕ ವೇದವ ನೋಯ್ಯಲು ಮ
ಸಾಮಾಸುರ ನೆಂಬವನ ಕೊಂದು ಸಾಮಕ ವೇದವ ತಂದನು ಮ(೧)

ಗುಡ್ಡವು ಮುಳುಗಿ ಪೋಗಲು ನಮ್ಮದೇವ ಗುಡ್ಡವ ಬೆನ್ನಲ್ಲಿಟ್ಟನು ಮ
ಗುಡ್ಡದಂಥ ದೈತ್ಯರನ್ನೆಲ್ಲ ಅಡ್ಡ ಕೆಡಹಿ ಬಿಸುಟನು ಮ (೨)

ಚಿನ್ನ ಗಣ್ಣಿನವನು ಬಂದು ಕನ್ನೇ ಪೆಣ್ಣೆಯನೊಯ್ಯಲು ಮ
ವರ್ಣ ರೂಪವ ತಾಳಿ ಅವನ ಭಿನ್ನ ಭಿನ್ನವ ಮಾಡಿದ ಮ(೩)

ಕಂಭದಿಂದಲೇ ಉದಿಸಿ ನಮ್ಮ ದೇವ ಜಂಭದಸುರನ ಬಡಿದನು ಮ
ನಂಬಿದ ಪ್ರಹ್ಲಾದನ್ನ ಕಾಯಿದ ಅಂಬುಜನಾಭ ನರಸಿಂಗನು ಮ(೪)

ಬಲು ಮುರುಡನಾಗಿ ಭೂಮಿಯ ಬಲಿಯದಾನವ ಬೇಡಿದ ಮ
ಇಳೆಯ ಈರಡಿಯ ಮಾಡಿ ಬಲಿಯ ಪಾತಾಳಕೊತ್ತಿದ ಮ(೫)

ಕೊಡಲಿಯನ್ನು ಪಿಡಿದು ನಮ್ಮ ದೇವ ಕಡೆದ ಕ್ಷತ್ರಿಯರಾಯರ ಮ
ಹಡೆದ ತಾಯ ಶಿರವ ತರಿದು ಪಡೆದ ನಾಳೆಯ ಪ್ರಾಣವ ಮ(೬)

ಎಂಟೆರಡು ತಲೆಯ ಅಸುರನ ಕಂಠವ ಛೇದಿಸಿ ಬಿಟ್ಟನು ಮ
ಒಂಟಿ ರೂಪವ ತಾಳಿ ಲಂಕೆಯ ಬಂಟ ವಿಭೀಷಣಗಿತ್ತನು ಮ(೭)

ಸೋಳಸಾಸಿರ ಗೋಪಿಯರೊಡನೆ ಕೇಳಿ ಮೇಳದಲಿಪ್ಪನು ಮ
ಬಾಲಕನಾಗಿ ಪೆಣ್ಣ ರೂಪದಲಿ ಶ್ರೀಲೋಲ ಲಕ್ಷ್ಮಿಯ ಅರಸನು ಮ(೮)

ಒಪ್ಪದಿಂದಲಿ ಬಂದು ನಮ್ಮ ದೇವ ಇಪ್ಪೆವನದೊಳಗಿಪ್ಪನು ಮ
ಸರ್ಪಶರನಾಗಿ ಪೋಗಿ ತ್ರಿಪುರ ಸಂಹಾರ ಮಾಡಿದ ಮ(೯)

ಎಲ್ಲಮ್ಮ ಎಲ್ಲಮ್ಮ ನಮ್ಮ ದೇವ ಬಲ್ಲಿದ ಕಾಲ್ಕ್ಯಾವತಾರನು ಮ
ಇಳೆಯ ಸ್ವರ್ಗ ಪಾತಾಳಕ್ಕೊಡೆಯ ಚೆಲುವ ಹಯವದನನು ಮ(೧೦)





Composition: Shri Vadirajaru
Ankitha naama : Hayavadana
Tune Composition: Smt. Susheela Padaki Davangere
Musical instruments Composition: Shri Puttur Narasimha Nayak
Singer: RoopashreePrabhanjan
Video and editing:
Abhishek Joshi
Audio record: Omkar studios
Video record: Vijayanagara Bimba Ranga shikshana Kendra

Shri Krishnarpanamastu🙏

@highlight


‪@MantralayaYativara‬ ‪@LIVDevotional‬ ‪@SriSodeVadirajaMatha‬ ‪@TSeriesBhaktiSagar‬ ‪@MY3FOLKSONGS‬ ‪@Krishnadevotee7‬

show more

Share/Embed