Aati Kalanja | Tulunadu Culture | Vihara Plus | ಕುತ್ತಾರು ತಿಮ್ಮಕ್ಕ
Vihara Plus Vihara Plus
5.98K subscribers
17,810 views
323

 Published On Aug 6, 2021

#AatiKalanja #TulunaduCulture #ViharaPlus
ಆಷಾಢ ಮಾಸ, ತುಳುನಾಡಿನ ಆಟಿ ಎಂದರೆ ಅದು ಜಡಿ ಮಳೆಯ ಕಾಲ. ಮನೆ ಮಂದಿಗೆ, ಬೆಳೆಗಳಿಗೆ ರೋಗ ಬಾಧಿಸುವ ಅವಧಿ.
ಹೀಗಿರುವಾಗ ಎಲ್ಲ ರೋಗ ರುಜಿನಗಳನ್ನು ದೂರ ಮಾಡಲು, ಊರಿಗೆ ಬಂದ ಮಾರಿಯನ್ನು ಓಡಿಸುವುದಕ್ಕಾಗಿ ಮನೆ ಮನೆಗೆ ಬರುತ್ತಾನೆ ಈ ಆಟಿ ಕಳಂಜ.
ಈ ಆಟಿ ಕಳೆಂಜನು ಊರಿಗೆ ಬಂದ ಮಾರಿಯನ್ನು, ಮನುಷ್ಯ, ಸಾಕುಪ್ರಾಣಿಗಳು ಮತ್ತು ಬೆಳೆಗಳಿಗೆ ಬಂದ ರೋಗಗಳನ್ನು ಕಳೆಯುತ್ತಾನೆ ಎಂಬ ಪ್ರತೀತಿ ಇದೆ. ಆಟಿಕಳೆಂಜನನ್ನು ರೋಗ ಕಳೆವ ಮಾಂತ್ರಿಕನ ರೀತಿಯಲ್ಲಿ ಆರಾಧನೆ ಮಾಡಲಾಗುತ್ತದೆ. ಆಟಿಯಲ್ಲಿ ಕರಾವಳಿಯ ದೈವಗಳು ಘಟ್ಟ ಹತ್ತುತ್ತವೆ ಎಂಬ ನಂಬಿಕೆಯಿದೆ. ಆದ್ದರಿಂದ ಆಟಿಯ ಒಂದು ತಿಂಗಳ ಕಾಲ ದೈವಸ್ಥಾನಗಳ ಬಾಗಿಲು ಹಾಕಲಾಗುತ್ತದೆ‌. ಈ ಸಂದರ್ಭದಲ್ಲಿ ಊರಿಗೆ ಬಂದ ಸಂಕಷ್ಟವನ್ನು ಕಳೆಯಲೆಂದೇ ಕಳೆಂಜ ಬರುತ್ತಾನೆ. ಆಟಿ ಕಳೆಂಜ ದುಷ್ಟ ಶಕ್ತಿಯನ್ನು ಕುಣಿತ ಹಾಗೂ ನೃತ್ಯದ ಮೂಲಕ ಹೋಗಲಾಡಿಸುತ್ತಾನೆ ಎಂದು ತುಳುವರು ನಂಬುತ್ತಾರೆ.
ಆಟಿಕಳಂಜ ಆಚರಣೆ ನಡೆಸಿಕೊಂಡು ಬರುವವರು ನಲಿಕೆ ಸಮುದಾಯದದವರು. ಆಟಿ ಕಳಂಜ ವೇಷ ಹಾಕುವುದು ಹೆಚ್ಚಾಗಿ ಬಾಲಕರೇ. ದೊಡ್ಡವರಿಗೆ ಹಾಕುವುದು ವಿರಳ. ಬೆಳಗ್ಗೆ ೮ ರಹೊತ್ತಿಗೆ ಬಾಲಕನ ಮುಖಕ್ಕೆ ರಂಗುಬಳಿದು, ಅಣಿಗೊಳಿಸುತ್ತಾರೆ. ತೆಂಗಿನ ಎಳೆಯ ಗರಿಗಳಿಂದ ಹೆಣೆದು ಮಾಡಿದ ಸೊಂಟದ ಸಿರಿ, ತಲೆಗೆ ಕದಿರು ಮುಡಿ, ಪುಂಡಾಯಿಗಳನ್ನು ಕಟ್ಟಿ ಕೆಂಪು ಚಲ್ಲಣ, ಗೆಜ್ಜೆಯನ್ನು ಧರಿಸುತ್ತಾರೆ. ತೆಂಗು ಅಥವಾ ಮುಂಡೇವಿನ ಎಲೆಗಳಿಂದ ಮಾಡಿದ ಆಕರ್ಷಕ ಕೊಡೆಯನ್ನು ಹಿಡಿಯುತ್ತಾರೆ.
ನೆನಪಿಡಿ. ಆಟಿ ತಿಂಗಳ ಪ್ರತಿದಿನವೂ ಬೆಳಗ್ಗೆ ಹೊಸದಾಗಿ ವೇಷ ಹಾಕಬೇಕಾಗುತ್ತದೆ. ಪ್ರತಿದಿನವೂ ಈ ಸಿದ್ಧತೆ ಆಗಲೇಬೇಕು.
ಕಳೆಂಜನು ಆ ಕೊಡೆಯನ್ನು ತಿರುಗಿಸುತ್ತಾ ಮನೆಮನೆಗೆ ತೆರಳುತ್ತಾನೆ. ಅವನೊಂದಿಗೆ ಬರುವ ಪಾಡ್ದನ ತಿಳಿದ ಹಿರಿಯರೊಬ್ಬರು ತೆಂಬರೆ ಬಾರಿಸುತ್ತಾ ಪದ ಹೇಳುತ್ತಾರೆ. ಆಟಿ ಕಳಂಜ ತೆಂಬರೆಯ ನಾದಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಿರುತ್ತಾನೆ. ಇಲ್ಲಿ ಪಾಡ್ದನದ ಜಾಣೆ, ಮಂಗಳೂರಿನ ಉಳ್ಳಾಲದ ತೊಕ್ಕೊಟ್ಟು ಸಮೀಪದ ಕುತ್ತಾರು ತಿಮ್ಮಕ್ಕ ಹಲವಾರು ವರ್ಷಗಳಿಂದ ಆಟಿ ಕಳಂಜನನ್ನು ಊರಲ್ಲಿ ಕೊಂಡೊಯ್ಯುತ್ತಾ ಮಾರಿಯನ್ನೋಡಿಸುವ ಕೆಲಸ ಮಾಡುತ್ತಿದ್ದಾರೆ.
ಆಟಿಕಳಂಜ ಕುಣಿದ ನಂತರ ಮನೆಯವರು ಗೆರಸೆಯಲ್ಲಿ ಅಕ್ಕಿ, ಫಲವಸ್ತು, ಕಾಣಿಕೆ, ತೆಂಗಿನಕಾಯಿ ಎಲೆ ಅಡಿಕೆ, ಹುಳಿ, ಮಸಿ, ಉಪ್ಪು, ಹಲಸಿನಬೇಳೆ ಇತ್ಯಾದಿಗಳನ್ನಿರಿಸಿ ಕೊಡುತ್ತಾರೆ. ಆಟಿ ಕಳಂಜನ ಆಶೀರ್ವಾದ ಪಡೆಯುತ್ತಾರೆ. ಈ ಕುಣಿತ ಪ್ರಕಾರವು ಅಳಿವಿನಂಚಿನಲ್ಲಿದ್ದು, ಅಲ್ಲೊಂದು, ಇಲ್ಲೊಂದು ಕಡೆಗಳಲ್ಲಿ ಈ ಕುಣಿತ ಕಾಣಿಸಿಕೊಳ್ಳುತ್ತಿದೆ.

Aati month of Tulu Calendar, coastal part of karnataka comes in intense monsoon season. It brings many diseases to men and pets and even for crops. So as per Tulu traditions Aati Kalanja, believed to be a wizard goes to homes and dances to the beats of Tembare(a leather instrument) and folk song(paddana). His dance is believed to be the blessing to the home and drives away evils and diseases. This practice is a rare sight now and very few people do in every Aati month. Here we are featuring Kuthar Thimmakka, an elderl woman from Nalike community who has been practicing Aati kalanja since 3 decades.
------------------------------------------------------------------
For any querries contact : VENU VINOD
94483 86876 / [email protected]

show more

Share/Embed