ಪ್ರಕಟನೆಗಳು 16:1-21 Bro/Jesus Bible@KannadaBible103
KannadaBible103 KannadaBible103
270 subscribers
57 views
0

 Published On Sep 20, 2024

ಪ್ರಕಟನೆಗಳು 16:1-21 Bro/Jesus Bible@KannadaBible103

16


1 ಆಗ ಪವಿತ್ರಸ್ಥಾನದಿಂದ ಬಂದ ಮಹಾ ಶಬ್ದವನ್ನು✽ ಕೇಳಿದೆನು. ಅದು ಆ ಏಳು ಮಂದಿ ದೇವದೂತರಿಗೆ – ನೀವು ಹೋಗಿ ಆ ಏಳು ಪಾತ್ರೆಗಳಲ್ಲಿರುವ✽ ದೇವರ ರೌದ್ರವನ್ನು ಭೂವಿುಯ ಮೇಲೆ ಹೊಯ್ಯಿರಿ ಎಂದು ಹೇಳಿತು.
2 ಆಗ ಮೊದಲನೆಯವನು ಹೊರಟು ತನ್ನ ಪಾತ್ರೆಯಲ್ಲಿದ್ದದ್ದನ್ನು ಭೂವಿುಗೆ ಹೊಯ್ದನು; ಕೂಡಲೇ ಮೊದಲನೆಯ ಮೃಗದ ಗುರುತನ್ನು ಹೊಂದಿ ಅದರ ವಿಗ್ರಹಕ್ಕೆ ನಮಸ್ಕಾರಮಾಡುವ ಮನುಷ್ಯರ ಮೈಮೇಲೆ ಕೆಟ್ಟ ಉರಿಹುಣ್ಣು✽ ಎದ್ದಿತು.
3 ಎರಡನೆಯವನು ತನ್ನ ಪಾತ್ರೆಯಲ್ಲಿದ್ದದ್ದನ್ನು ಸಮುದ್ರದ✽ ಮೇಲೆ ಹೊಯಿದನು. ಅದರ ನೀರು ಸತ್ತವನ ರಕ್ತದ ಹಾಗಾಯಿತು; ಮತ್ತು ಸಮುದ್ರದಲ್ಲಿದ್ದ ಜೀವಜಂತುಗಳೆಲ್ಲವು ಸತ್ತುಹೋದವು.
4 ✽ಮೂರನೆಯವನು ತನ್ನ ಪಾತ್ರೆಯಲ್ಲಿದ್ದದ್ದನ್ನು ನದಿಗಳ ಮೇಲೆಯೂ ನೀರಿನ ಬುಗ್ಗೆಗಳ ಮೇಲೆಯೂ ಹೊಯಿದನು; ಅವುಗಳ ನೀರು ರಕ್ತವಾಯಿತು. 5 ✽ಆಮೇಲೆ ಜಲಾಧಿಪತಿಯಾದ ದೂತನು –
ಸದಾ ಇರುವಾತನೇ, ಪರಿಶುದ್ಧನೇ,
ನೀನು ಹೀಗೆ ತೀರ್ಪುಮಾಡಿದ್ದರಲ್ಲಿ ನೀತಿಸ್ವರೂಪನಾಗಿದ್ದೀ.
6 ✽ಅವರು ದೇವಜನರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದರು;
ನೀನು ಅವರಿಗೆ ರಕ್ತವನ್ನೇ ಕುಡಿಯುವದಕ್ಕೆ ಕೊಟ್ಟಿದ್ದೀ;
ಇದಕ್ಕೆ ಅವರು ಪಾತ್ರರು✽
ಎಂದು ಹೇಳುವದನ್ನು ಕೇಳಿದೆನು. 7 ಆಮೇಲೆ ಯಜ್ಞವೇದಿಯು✽ ಮಾತಾಡುತ್ತಾ – ದೇವರಾದ ಕರ್ತನೇ, ಸರ್ವಶಕ್ತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ ನಿಜ ಎಂದು ಹೇಳುವದನ್ನು ಕೇಳಿದೆನು.
8 ನಾಲ್ಕನೆಯವನು ತನ್ನ ಪಾತ್ರೆಯಲ್ಲಿದ್ದದ್ದನ್ನು ಸೂರ್ಯನ✽ ಮೇಲೆ ಹೊಯ್ದನು; ಆಗ ಸೂರ್ಯನಿಗೆ ಕಡುಬಿಸಿಲಿನಿಂದ ಮನುಷ್ಯರನ್ನು ಕಂದಿಸುವ ಶಕ್ತಿಯು ಕೊಡಲ್ಪಟ್ಟಿತು. 9 ಮನುಷ್ಯರು ಬಲವಾದ ಕಾವಿನಿಂದ ಕಂದಿಹೋದರೂ ಅವರು ದೇವರನ್ನು ಘನಪಡಿಸುವ ಹಾಗೆ ಮಾನಸಾಂತರಮಾಡಿಕೊಳ್ಳದೆ✽ ಈ ಉಪದ್ರವಗಳ ಮೇಲೆ ಅಧಿಕಾರವುಳ್ಳ ದೇವರ ನಾಮವನ್ನು ದೂಷಿಸಿದರು.✽
10 ಐದನೆಯವನು ತನ್ನ ಪಾತ್ರೆಯಲ್ಲಿದ್ದದ್ದನ್ನು ಮೊದಲನೆಯ ಮೃಗದ ಸಿಂಹಾಸನದ✽ ಮೇಲೆ ಹೊಯ್ಯಲು ಅದರ ರಾಜ್ಯವು ಕತ್ತಲಾಯಿತು.✽ ಜನರು ತಮಗಾದ ಕಷ್ಟದ ದೆಸೆಯಿಂದ✽ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು 11 ತಮ್ಮ ಕೃತ್ಯಗಳ ವಿಷಯದಲ್ಲಿ ಮಾನಸಾಂತರಮಾಡಿಕೊಳ್ಳದೆ ತಮ್ಮ ಕಷ್ಟಗಳ ದೆಸೆಯಿಂದಲೂ ಹುಣ್ಣುಗಳ ದೆಸೆಯಿಂದಲೂ ಪರಲೋಕ ದೇವರನ್ನು ದೂಷಿಸಿದರು.
12 ✽ಆರನೆಯವನು ತನ್ನ ಪಾತ್ರೆಯಲ್ಲಿದ್ದದ್ದನ್ನು ಯೂಫ್ರೇಟೀಸ್✽ ಎಂಬ ಮಹಾ ನದಿಯ ಮೇಲೆ ಹೊಯ್ಯಲು ಅದರ ನೀರು ಇಂಗಿಹೋಯಿತು; ಇದರಿಂದ ಮೂಡಣ ದಿಕ್ಕಿನಿಂದ ಬರುವ ರಾಜರಿಗೆ ಮಾರ್ಗವು ಸಿದ್ಧವಾಯಿತು. 13 ✽ಮತ್ತು ಘಟಸರ್ಪ ಮೃಗ ಸುಳ್ಳುಪ್ರವಾದಿ ಇವರ ಬಾಯಿಗಳಿಂದ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳು ಬರುವದನ್ನು ಕಂಡೆನು. 14 ಇವು ಮಹತ್ಕಾರ್ಯಗಳನ್ನು ಮಾಡುವ ದೆವ್ವಗಳು; ಭೂಲೋಕದಲ್ಲೆಲ್ಲಿಯೂ ಇರುವ ರಾಜರ ಬಳಿಗೆ ಹೋಗಿ ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧಕ್ಕೆ✽ ಅವರನ್ನು ಕೂಡಿಸುವವು. 15 (ಇಗೋ, ಕಳ್ಳನು ಬರುವಂತೆ✽ ಬರುತ್ತೇನೆ; ತಾನು ನಿರ್ವಾಣನಾಗಿ✽ ತಿರುಗಾಡಿ ಅವಮಾನಕ್ಕೆ ಗುರಿಯಾದೇನೆಂದು ಎಚ್ಚರವಾಗಿದ್ದು✽ ತನ್ನ ವಸ್ತ್ರಗಳನ್ನು ಕಾಪಾಡಿಕೊಳ್ಳುವವನು ಧನ್ಯನು.) 16 ಆ ದೆವ್ವಗಳು✽ ಭೂರಾಜರನ್ನು ಇಬ್ರಿಯ ಭಾಷೆಯಲ್ಲಿ ಹರ್ಮಗೆದೋನ್✽✽ ಎಂಬ ಹೆಸರುಳ್ಳ ಸ್ಥಳಕ್ಕೆ ಕೂಡಿಸಿದವು.
17 ಏಳನೆಯವನು ತನ್ನ ಪಾತ್ರೆಯಲ್ಲಿದ್ದದ್ದನ್ನು ವಾಯುಮಂಡಲದ ಮೇಲೆ ಹೊಯ್ಯಲು ದೇವಾಲಯದಲ್ಲಿರುವ✽ ಸಿಂಹಾಸನದ ಕಡೆಯಿಂದ✽ ಮಹಾ ಶಬ್ದವು ಉಂಟಾಗಿ – ಆಯಿತು ಎಂದು ಹೇಳಿತು. 18 ✽ಆಗ ವಿುಂಚುಗಳೂ ವಾಣಿಗಳೂ ಗುಡುಗುಗಳೂ ಉಂಟಾದವು; ಇದಲ್ಲದೆ ಮಹಾ ಭೂಕಂಪವಾಯಿತು;✽ ಮನುಷ್ಯರು ಭೂವಿುಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಲಿಲ್ಲ. 19 ಮಹಾ ಪಟ್ಟಣವು✽ ಮೂರು ಭಾಗವಾಯಿತು; ಜನಾಂಗಗಳ ಪಟ್ಟಣಗಳು ಬಿದ್ದವು.✽ ಇದಲ್ಲದೆ ದೇವರು ದೊಡ್ಡ ಬಾಬೆಲನ್ನು ಜ್ಞಾಪಿಸಿಕೊಂಡು ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದ ಪಾತ್ರೆಯನ್ನು✽ ಅವಳಿಗೆ ಕುಡಿಯಲು ಕೊಟ್ಟನು. 20 ✽ಆಗ ದ್ವೀಪಗಳೆಲ್ಲಾ ಓಡಿಹೋದವು; ಬೆಟ್ಟಗಳು ಸಿಕ್ಕದೆ ಹೋದವು. 21 ಮತ್ತು ಆಕಾಶದಿಂದ ಮನುಷ್ಯರ ಮೇಲೆ ದೊಡ್ಡ ಆನೇಕಲ್ಲಿನ ಮಳೆ✽ ಸುರಿಯಿತು; ಒಂದೊಂದು ಕಲ್ಲು ಹೆಚ್ಚುಕಡಿಮೆ ನಾಲ್ಕುಮಣ✽ ತೂಕವಾಗಿತ್ತು. ಆ ಆನೇಕಲ್ಲಿನ ಮಳೆಯ ಕಾಟವು ಬಹಳ ಹೆಚ್ಚಾಗಿದ್ದದರಿಂದ ಆ ಮಳೆಯಲ್ಲಿ ಸಿಕ್ಕಿಕೊಂಡ ಮನುಷ್ಯರು ದೇವರನ್ನು ದೂಷಿಸಿದರು.✽

show more

Share/Embed