Bhavageethe - Onde Baari Nanna Nodi : ಭಾವಗೀತೆ - ಒಂದೇ ಬಾರಿ ನನ್ನ ನೋಡಿ
Ravindra PC Ravindra PC
6.61K subscribers
1,389,546 views
8.9K

 Published On Jun 7, 2008

ಕನ್ನಡ ಭಾವಗೀತೆ - ಒಂದೇ ಬಾರಿ ನನ್ನ ನೋಡಿ : Kannada Bhavageethe - Onde Baari Nanna Nodi

ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ (೨)
ಮುಂದ ಮುಂದ ಮುಂದ ಹೋದ
ಹಿಂದ ನೋಡದ ಗೆಳತಿ.. ಹಿಂದ ನೋಡದ (೨) (ಒಂದೇ ಬಾರಿ)

ಗಾಳಿ ಹೆಜ್ಜೆ ಹಿಡಿದ ಸುಗಂದ ಅತ್ತ ಅತ್ತ ಹೋಗು ಅಂದ (೨)
ಹೋತ ಮನಸ್ಸು ಅವನ ಹಿಂದ ನೋಡದ (೨)
ಹಿಂದ ನೋಡದ ಗೆಳತಿ.. ಹಿಂದ ನೋಡದ (ಒಂದೇ ಬಾರಿ)

ನಂದ ನನಗ ಎಚ್ಚರಿಲ್ಲ ಮಂದಿ ಗೊಡವಿ ಏನ ನನಗ (೨)
ಒಂದೆ ಅಳತಿ ನಡದದ ಚಿತ್ತ ಹಿಂದ ನೋಡದ (೨)
ಗೆಳತಿ ಹಿಂದ ನೋಡದ.. ಹಿಂದ ನೋಡದ ಗೆಳತಿ ಹಿಂದ ನೋಡದ (ಒಂದೇ ಬಾರಿ)

ಸೂಜಿ ಹಿಂದ ದಾರದಾಂಗ ಕೊಳದೊಳಗ ಜಾರಿದಾಂಗ (೨)
ಹೋತ ಹಿಂದ ಬಾರದಾಂಗ ಹಿಂದ ನೋಡದ (೨)
ಹಿಂದ ನೋಡದ ಗೆಳತಿ.. ಹಿಂದ ನೋಡದ

ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ (೨)
ಮುಂದ ಮುಂದ ಮುಂದ ಹೋದ ಹಿಂದ ನೋಡದ (೨)
ಗೆಳತಿ ಹಿಂದ ನೋಡದ..
ಹಿಂದ ನೋಡದ ಗೆಳತಿ.. ಹಿಂದ ನೋಡದ (೩)
--ದ.ರಾ.ಬೇಂದ್ರೆ

show more

Share/Embed