Big Bulletin | 33 Lakh Farmers To Get Rs 24,000 Crore As Farm Loans | HR Ranganath | March 4, 2022
Public TV Public TV
5.82M subscribers
363,001 views
2K

 Published On Mar 4, 2022

Big Bulletin | 33 Lakh Farmers To Get Rs 24,000 Crore As Farm Loans | HR Ranganath | March 4, 2022

#PublicTV #BigBulletin #HRRanganath

Watch Live Streaming On http://www.publictv.in/live

ಕೃಷಿ ವಲಯಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಏನು ಸಿಕ್ಕಿದೆ ಎಂಬುದನ್ನು ನೋಡೋಣ.

ರೈತರ ಆದಾಯ ಹೆಚ್ಚಳಕ್ಕೆ ಆದ್ಯತೆ ಏನು?
3 ಲಕ್ಷ ಹೊಸ ರೈತರು ಸೇರಿ ೩೩ ಲಕ್ಷ ರೈತರಿಗೆ ಬಡ್ಡಿ ರಿಯಾಯ್ತಿಯಡಿ 24,000 ಕೋಟಿ ಸಾಲ ವಿತರಣೆ ಗುರಿ.
ರೈತರ ಆರೋಗ್ಯಕ್ಕಾಗಿ ಮತ್ತೆ ಯಶಸ್ವಿನಿ ಯೋಜನೆ
`ರೈತ ಶಕ್ತಿ' ಯೋಜನೆ - ಯಂತ್ರೋಪಕರಣಗಳ ಬಳಕೆ ಉತ್ತೇಜನ - ಪ್ರತಿ ಎಕರೆಗೆ 250 ರೂ.ಗಳಂತೆ ಡೀಸೆಲ್ ಸಹಾಯಧನ
ಕೆಪೆಕ್ ಮೂಲಕ ಕೃಷಿ ಉತ್ಪನ್ನಗಳ ಕೊಯ್ಲಿನೋತ್ತರ ನಿರ್ವಹಣೆ, ಮಾರಾಟ ಮತ್ತು ರಫ್ತಿಗೆ ಉತ್ತೇಜನ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮಿನಿ ಆಹಾರ ಪಾರ್ಕ್
ದ್ರಾಕ್ಷಿ ಬೆಳೆಗಾರರಿಗಾಗಿ ವಿಜಯಪುರದ ತೊರವಿಯಲ್ಲಿ ಅತ್ಯಾಧುನಿಕ ಶೈತ್ಯಾಗಾರ( ಶೀತಲೀಕೃತ ಸರಕು ಸಾಗಣೆ ವಾಹನ )
ಬಳ್ಳಾರಿ ಜಿಲ್ಲೆಯ ಹಗರಿ ಹಾಗೂ ಬೆಳಗಾವಿಯ ಅಥಣಿಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ.
ಪ್ರತಿ ಟನ್ ದ್ವಿತಳಿ ರೇಷ್ಮೆಗೂಡಿಗೆ 10 ಸಾವಿರ ರೂ. ಪ್ರೋತ್ಸಾಹ ಧನ
ಕಲಬುರಗಿ ಮತ್ತು ಹಾವೇರಿ ಜಿಲ್ಲೆಯಲ್ಲಿ ಹೈಟೆಕ್ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ
ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಲು ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್
ಕುರಿ/ಮೇಕೆ ಸಾಕಾಣಿಕೆದಾರರು/ವಲಸೆ ಕುರಿಗಾರರ ಕುಟುಂಬಕ್ಕೆ 5 ಲಕ್ಷ ರೂ. ವಿಮಾ ಸೌಲಭ್ಯ.
ರಾಜ್ಯದಲ್ಲಿರುವ ಗೋಶಾಲೆಗಳ ಸಂಖ್ಯೆ 100ಕ್ಕೆ ಹೆಚ್ಚಳ

ಬಹುಸಂಖ್ಯಾತ ಹಿಂದೂಗಳ ಪ್ರಮುಖ ಬೇಡಿಕೆಯಾದ, ಮುಜುರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ಸ್ವಾಯತ್ತತೆ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮೂಲಕ ಅಧಿಕೃತ ಘೋಷಣೆ ಮಾಡಿದ್ದಾರೆ. ದೇಗುಲಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತ ಮಾಡುವಂತೆ ಭಕ್ತರು ಇಟ್ಟಿದ್ದ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ ಎಂದು ಸಿಎಂ ಪ್ರಕಟಿಸಿದ್ರು. ಇದರ ಜೊತೆಗೆ ಧಾರ್ಮಿಕ ಮತ್ತು ಸಮುದಾಯಗಳಿಗೆ ಸಂಬಂಧಿಸಿದಂತೆ ಇನ್ನೂ ಹಲವು ಘೋಷಣೆಗಳನ್ನು ಸಿಎಂ ಮಾಡಿದ್ದಾರೆ. ಅದೇನು ಎಂಬುದನ್ನು ನೋಡಿ.

ಪ್ರಮುಖ ಧಾರ್ಮಿಕ ಘೋಷಣೆಗಳು
ಮುಜುರಾಯಿ ಇಲಾಖೆಯ ದೇಗುಲಗಳಿಗೆ ಸ್ವಾಯತ್ತತೆ
ದೇವಾಲಯಗಳ ಅಭಿವೃದ್ಧಿಗೆ 158 ಕೋಟಿ ಅನುದಾನ
ದೇಗುಲಗಳ ಅರ್ಚಕರು, ಆಗಮಿಕರು, ನೌಕರರ ತಸ್ತಿಕ್ ಹಣ - 48ರಿಂದ 60 ಸಾವಿರಕ್ಕೆ ಹೆಚ್ಚಳ
ಗೋವುಗಳನ್ನು ದತ್ತು ತೆಗೆದುಕೊಳ್ಳಲು ಪುಣ್ಯಕೋಟಿ ಯೋಜನೆ
ಕಾಶಿ ಯಾತ್ರೆ ಕೈಗೊಳ್ಳುವವರಿಗೆ 5 ಸಾವಿರ ರೂ.ಸಹಾಯಧನ
100 ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ
ಚಾಮುಂಡಿ, ದತ್ತಪೀಠದಲ್ಲಿ ರೋಪ್‌ವೇ ನಿರ್ಮಾಣ ಪ್ರಸ್ತಾವನೆ
ಆಂಧ್ರದ ಶ್ರೀಶೈಲಂನಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣ
ಕುಕ್ಕೆ, ಧರ್ಮಸ್ಥಳ, ಮಂತ್ರಾಲಯ, ತಿರುಪತಿಗೆ ಪ್ಯಾಕೇಜ್ ಟ್ರಿಪ್

ಪ್ರಮುಖ ಸಮುದಾಯಗಳಿಗೆ ಕೋಟಿ ಕೋಟಿ ಹಣ..!
ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ 400 ಕೋಟಿ ರೂ.
ಇತರ ಹಿಂದುಳಿದ ಸಮುದಾಯಗಳಿಗೆ 400 ಕೋಟಿ ರೂ.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 100 ಕೋಟಿ
ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ.
ಮರಾಠಾ ಅಭಿವೃದ್ಧಿ ನಿಗಮಕ್ಕೆ 50 ಕೋಟಿ
ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 50 ಕೋಟಿ
ಜೈನ, ಸಿಖ್ ಮತ್ತು ಬೌದ್ಧ ಸಮುದಾಯಗಳ ಅಭಿವೃದ್ಧಿಗೆ 50 ಕೋಟಿ ರೂ.

ಇನ್ನು, ನಿರೀಕ್ಷೆಯಂತೆ ಪ್ರಾಥಮಿಕ ಶಿಕ್ಷಣದಲ್ಲಿ ಎನ್‌ಇಪಿ ಅಳಡಿವಡಿಸಲು ಈ ಬಜೆಟ್ ಮೂಲಕ ಬಿಜೆಪಿ ಕ್ರಮ ತೆಗೆದುಕೊಂಡಿದೆ. ನೀಟ್ ವಿರೋಧಿ ಆಂದೋಲನದ ಟಾಂಗ್ ನೀಡುವಂತೆ ಜಿಲ್ಲಾ ಮಟ್ಟದಲ್ಲೂ ನೀಟ್ ತರಬೇತಿ ಕೇಂದ್ರಗಳನ್ನು ಶುರುಮಾಡುವುದಾಗಿ ಬೊಮ್ಮಾಯಿ ಘೋಷಿಸಿದ್ದಾರೆ.

ಬೊಮ್ಮಾಯಿ ಬಜೆಟ್‌ನಲ್ಲಿ ಶಿಕ್ಷಣಕ್ಕೇನು..?
ಎನ್‌ಇಪಿ ಮಾರ್ಗಸೂಚಿಯಂತೆ ಶಾಲೆಗಳಲ್ಲಿ ನೂತನ ಪಠ್ಯಕ್ರಮ
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ನೀಟ್ ಪರೀಕ್ಷೆ ತರಬೇತಿ ಕೇಂದ್ರ
ಸರ್ಕಾರಿ ಕೋಟಾದ ಬಡ ವೈದ್ಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ
ಖಾಸಗಿ ವೈದ್ಯಕೀಯ ಕಾಲೇಜುಗಳ ಶುಲ್ಕ ನಿಯಂತ್ರಣಕ್ಕೆ ಕ್ರಮ (ಸಮಿತಿ ರಚನೆ)
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಪ್ರಾರಂಭ.
ರಾಜ್ಯದ 7 ಜಿಲ್ಲೆಗಳಲ್ಲಿ 7 ಹೊಸ ಮಾದರಿ ವಿಶ್ವವಿದ್ಯಾಲಯ
(ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ)
7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣ (ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)
4 ಜಿಲ್ಲೆಗಳಲ್ಲಿ ನಾರಾಯಣ ಗುರು ವಸತಿ ಶಾಲೆ (ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ,ಶಿವಮೊಗ್ಗ)
ಹಿಂದುಳಿದ ವರ್ಗದ 25 ಸಾವಿರ ಯುವಕರಿಗೆ ಕೌಶಲ್ಯ ತರಬೇತಿ - ಅಮೃತ ಮುನ್ನಡೆ ಯೋಜನೆ
ಕೆಪಿಎಸ್‌ಸಿ, ಯುಪಿಎಸ್‌ಸಿ, ಉನ್ನತ ವ್ಯಾಸಂಗದ ತರಬೇತಿಗಾಗಿ `ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿ' ಯೋಜನೆ


Download Public TV app here:
Android: https://play.google.com/store/apps/de...

iOS: https://apps.apple.com/in/app/public-...

Keep Watching Us On Youtube At:    / publictvnewskannada  
Watch More From This Playlist Here:    / publictvnewskannada  



Read detailed news at www.publictv.in

Subscribe on YouTube: https://www.youtube.com/user/publictv...
Follow us on Google+ @ https://plus.google.com/+publictv
Like us @   / publictv  
Follow us on twitter @   / publictvnews  

--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

show more

Share/Embed